Bhopal Accident: ಕಾರಿನ ಮೇಲೆ ಮಗುಚಿ ಬಿದ್ದ ಸಿಮೆಂಟ್‌ ಟಿಪ್ಪರ್‌: ಒಂದೇ ಕುಟುಂಬದ 9 ಮಂದಿ ದಾರುಣ ಸಾವು

Share the Article

Bhopal Accident: ಸಿಮೆಂಟ್‌ ಸಾಗಿಸುತ್ತಿದ್ದ ಟಿಪ್ಪರ್‌ವೊಂದು ಕಾರಿನ ಮೇಲೆ ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ 9 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ಝಬುವಾ ಜಿಲ್ಲೆಯಲ್ಲಿ ನಡೆದಿದೆ.

ಮೇಘನಗರದ (MeghaNagar) ಶಿವಗಢ ಮಹುದಾ ಗ್ರಾಮದ ನಿವಾಸಿಗಳಾದ ಮುಖೇಶ್ (40), ಸಾವ್ಲಿ (35), ವಿನೋದ್ (16), ಪಾಯಲ್ (12), ಮಾಧಿ (38), ವಿಜಯ್ ಭರು ಬಮಾನಿಯಾ (14), ಕಾಂತಾ (14), ರಾಗಿಣಿ (9), ಮತ್ತು ಅಕಾಲಿ (35) ಮೃತರೆಂದು ಗುರುತಿಸಲಾಗಿದೆ. ಪಾಯಲ್ ಸೋಮ್ಲಾ (19) ಮತ್ತು ಆಶು (5) ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.

ನಸುಕಿನ ಜಾವ 2.30 ರ ಸುಮಾರಿಗೆ ಈ ಅಪಘಾತ ನಡೆದಿದೆ. ಕುಟುಂಬವು ಮದುವೆ ಕಾರ್ಯಕ್ರಮದಿಂದ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಮೇಘನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಸಂಜೆಲಿ ರೈಲ್ವೇ ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದೆ.

Comments are closed.