Kolara: ಕೋಲಾರದಲ್ಲಿ ಪೈಶಾಚಿಕ ಕೃತ್ಯ: 80ರ ವೃದ್ಧೆ ಮೇಲೆ ಅತ್ಯಾಚಾರ ಮಾಡಿ ಕೊಲೆ

Share the Article

Kolara: ಹಳ್ಳಿಯಿಂದ ಪಟ್ಟಣಕ್ಕೆ ಬಂದ 80ವರ್ಷದ ವೃದ್ಧೆಯೊಬ್ಬರು ಚರ್ಚ್‌ ಮತ್ತು ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಒಂದೆರಡು ದಿನ ಪಟ್ಟಣದಲ್ಲಿಯೇ ಓಡಾಡಿಕೊಂಡು ನಂತರ ಹಳ್ಳಿ ಕಡೆ ವಾಪಾಸ್‌ ಹೋಗುವುದರಲ್ಲಿದ್ದು, ಅಷ್ಟರಲ್ಲಿ ಬಂದ ವ್ಯಕ್ತಿಯೋರ್ವ ಆಕೆಯನ್ನು ಎತ್ತಾಕ್ಕೋಡು ಹೋಗಿ ಅತ್ಯಾಚಾರ ಮಾಡಿ, ಕೊಲೆ ಮಾಡಿ, ಆಕೆಯ ಬಳಿಯಿದ್ದ ಹಣ ಒಡವೆಗಳನ್ನು ದೋಚಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದೆ.

ವಿಷಯ ತಿಳಿದು ಪೊಲೀಸರು ಘಟನಾ ಸ್ಥಳಕ್ಕೆ ಬಂದಿದ್ದು, ಪರಿಶೀಲನೆ ಮಾಡಿ ವೃದ್ಧೆಯನ್ನು ಯಾರೋ ಅತ್ಯಾಚಾರ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ.

ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಮಹಿಳೆ ಶ್ರೀನಿವಾಸಪುರ ತಾಲ್ಲೂಕು ಹೆಚ್‌.ಜಿ.ಹೊಸೂರು ಗ್ರಾಮದ ಲಕ್ಷ್ಮೀದೇವಮ್ಮ (80) ಎಂದು ತಿಳಿದು ಬಂದಿದೆ. ಸೋಮವಾರ ಸಂಜೆ ಹೆಚ್‌.ಜಿ.ಹೊಸೂರು ಗ್ರಾಮಕ್ಕೆಂದು ವಾಪಾಸು ಹೋಗಲು ಬಸ್‌ಗೆಂದು ಕಾದು ಕುಳಿತಿದ್ದಾಗ ಅಲ್ಲಿಗೆ ಬಂದ ವ್ಯಕ್ತಿ ಆಕೆಯನ್ನು ಎತ್ತಾಕ್ಕೊಂಡು ಹೋಗಿ ಅತ್ಯಾಚಾರ ಮಾಡಿ ಕುತ್ತಿಗೆ ಹಿಸುಕಿ ಕೊಲೆ ಮಾಡಿ, ಆಕೆಯ ಬ್ಯಾಗ್‌ನಲ್ಲಿದ್ದ 15 ಸಾವಿರ ರೂ. ಹಣವನ್ನು ದೋಚಿ ಪರಾರಿಯಾಗಿದ್ದಾನೆ.

ಸಿಸಿಟಿವಿ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಮಾಡಲಾಗಿದೆ. ಆರೋಪಿ ಕೊಲೆ ಮಾಡಿದ ನಂತರ ಸ್ವಲ್ಪ ಹೊತ್ತು ಬಿಟ್ಟು ಘಟನಾ ಸ್ಥಳಕ್ಕೆ ಬಂದಿದ್ದು, ಅಲ್ಲೇನಾಗಿದೆ ಎಂದು ನೋಡಲು ಬಂದಿದ್ದ ಎನ್ನಲಾಗಿದೆ.

ಆರೋಪಿ ಗಫರ್‌ಖಾನ್‌ ಮೊಹಲ್ಲಾದ ಮುನ್ನಿಸಾಬ್‌ ಎಂಬುವವರ ಮಗ ಬಾಬಾ ಜಾನ್‌ ಅನ್ನೋದು ತಿಳಿದು ಬಂದಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಾಗ ಆತ ಅತ್ಯಾಚಾರ ಮಾಡಿ ಹದಿನೈದು ಸಾವಿರ ಹಣ ದೋಚಿರುವುದಾಗಿ ಒಪ್ಪಿಕೊಂಡಿದ್ದಾನೆ.

Comments are closed.