Home News Punjalkatte: ಹಾವು ಕಡಿದು ನವವಿವಾಹಿತ ಸಾವು

Punjalkatte: ಹಾವು ಕಡಿದು ನವವಿವಾಹಿತ ಸಾವು

Hindu neighbor gifts plot of land

Hindu neighbour gifts land to Muslim journalist

Punjalkatte: ವಿಷದ ಹಾವೊಂದು ಕಡಿದ ಪರಿಣಾಮ ನವವಿವಾಹಿತ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಪಾದೆಮನೆ ಎಂಬಲ್ಲಿ ಸಂಭವಿಸಿದೆ.

ದಿ.ಇಸ್ಮಾಯಿಲ್‌ ಎಂಬುವವರ ಪುತ್ರ ಅಶ್ರಫ್‌ (28) ಮೃತಪಟ್ಟ ಯುವಕ. ಕೂಲಿ ಕೆಲಸ ಮಾಡಿಕೊಂಡಿದ್ದ ಇವರು ಪಾಂಡವರಕಲ್ಲಿನ ಮನೆಯೊಂದರಲ್ಲಿ ಮಧ್ಯಾಹ್ನದ ಸಮಯ ಅಡಿಕೆ ಸುಲಿಯುತ್ತಿದ್ದ ಸಂದರ್ಭದಲ್ಲಿ ಕಾಲಿನ ಬೆರಳಿಗೆ ಹಾವು ಕಡಿದಿದೆ. ಇವರಿಗೆ 6 ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು.