Madikeri: ರಿಯಾಯಿತಿ ದರದಲ್ಲಿ ಸಸಿ ಪಡೆಯಿರಿ : ಗಿಡ ನೆಡಲು ಸುವರ್ಣವಕಾಶ

Madikeri: ತಾಲ್ಲೂಕಿನ ಸಾಮಾಜಿಕ ಅರಣ್ಯ ವಲಯದ ಹೊದ್ದೂರು ವಾಟೆಕಾಡು ಅರಣ್ಯ ಇಲಾಖೆಯ ಸಸ್ಯಕ್ಷೇತ್ರದಲ್ಲಿ 2025-26 ನೇ ಸಾಲಿನ ಮಳೆಗಾಲದಲ್ಲಿ ನೆಡಲು ವಿವಿಧ ಹಣ್ಣಿನ, ಔಷಧೀಯ ಹಾಗೂ ಕಾಡು ಜಾತಿಯ ಸಸಿ ಬೆಳೆಸಲಾಗಿದೆ.

ಮಹಾಗನಿ, ಸಿಲ್ವರ್, ನೇರಳೆ, ಹಲಸು, ನಿಂಬೆ, ನೆಲ್ಲಿ, ಸಂಪಿಗೆ, ಕಾಡು ಬಾದಾಮಿ, ಲಾವಂಚ, ಮಾವು, ಹೆಬ್ಬಲಸು, ಸೀಬೆ, ತೇಗ, ಹೊನ್ನೆ, ಬಟರ್ ಪ್ರೂಟ್, ಬೀಟೆ, ಹಿಪ್ಪೆ, ಸಿಮಾರೂಬಾ, ಮುಂತಾದ ಸಸಿಗಳು ಲಭ್ಯವಿದ್ದು, ರೈತ ಫಲಾನುಭವಿಗಳಿಗೆ ಸರ್ಕಾರದ ಹೊಸ ಪರಿಷ್ಕøತ ಆದೇಶದಂತೆ ರೂ.6 ಪ್ರತಿ ಸಸಿಗೆ ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬಹುದು.
ರೈತರು ತಮ್ಮ ಆಧಾರ್ ಪ್ರತಿ, ರಾಷ್ಟ್ರೀಕೃತ ಬ್ಯಾಂಕ್ ಪಾಸ್‍ಬುಕ್ ಪ್ರತಿ, ತಮ್ಮ ಜಮೀನಿನ ಆರ್‍ಟಿಸಿ ಪ್ರತಿಯನ್ನು ನೀಡಿ ಸಸಿಗಳನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಮಡಿಕೇರಿ ಉಪ ವಲಯ ಅರಣ್ಯಾಧಿಕಾರಿ 9482915684, 9164698938, ಗಸ್ತು ಅರಣ್ಯ ಪಾಲಕರು-9632995904, 9980434942 ನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ಸಾಮಾಜಿಕ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ಅವರು ತಿಳಿಸಿದ್ದಾರೆ.
Comments are closed.