Shivamogga: ವೈದ್ಯಕೀಯ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

Shivamogga: ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ವಿಷ್ಣುಪ್ರಿಯಾ (23) ತಮ್ಮ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈಕೆ ಮೂಲತಃ ಬಳ್ಳಾರಿಯವಳಾಗಿದ್ದು, ತಂದೆ ಎಂಜಿನಿಯರ್ ಆಗಿರುತ್ತಾರೆ ಹಾಗೂ ಇವರ ಇಡೀ ಕುಟುಂಬ ಬಹರೆನ್ ನಲ್ಲಿ ವಾಸಮಾಡುತ್ತಿದ್ದಾರೆ. ಇನ್ನು ಈಕೆ MBBS ಮುಗಿಸಿದ್ದು, ಇಂಟರ್ನ್ಷಿಪ್ ಗಾಗಿ ಶಿವಮೊಗ್ಗದಲ್ಲಿರುತ್ತಾಳೆ.
ಈಕೆಯ ಗೆಳತಿಯರು ಊರಿಗೆ ಹೋದ ಸಮಯದಲ್ಲಿ ಒಬ್ಬಳೇ ರೂಮಿನಲ್ಲಿದ್ದ ವಿಷ್ಣುಪ್ರಿಯಾ ನೇಣು ಹಾಕಿಕೊಂಡಿದ್ದಾಳೆ. ಇನ್ನೂ ಯಾವುದೇ ಡೆತ್ ನೋಟ್ ಸಿಕ್ಕಿರುವುದಿಲ್ಲ ಹಾಗೂ ಸಾವು ಆತ್ಮಹತ್ಯೆಯಂತೆಯೇ ಕಾಣುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಜಿ. ಕೆ. ಮಿಥುನ್ ಕುಮಾರ್ ತಿಳಿಸಿದ್ದಾರೆ.
Comments are closed.