IPL-2025: ಫೈನಲ್ ಮ್ಯಾಚ್ ಮುನ್ನ RCB ದೊಡ್ಡ ಶಾಕ್ – ತಂಡದಿಂದ ಹೊರ ಬಿದ್ದ ‘ಸ್ಪೋಟಕ ಆಟಗಾರ’ !!

IPL -2025 ನಲ್ಲಿ ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಎತ್ತಿ ಹಿಡಿಯುವ ಪ್ರಯತ್ನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್(RCB vs PBKS Final) ತಂಡವನ್ನು ಎದುರಿಸುವ ಮುನ್ನವೇ ತಂಡಕ್ಕೆ ದೊಡ್ಡ ಆಘಾತವೊಂದು ಎದುರಾಗಿರುವುದಾಗಿ ತಿಳಿದುಬಂದಿದ್ದು, ಸ್ಪೋಟಕ ಆಟಗಾರನೇ ತಂಡದಿಂದ ಔಟ್ ಆಗಿದ್ದಾರೆ.

BREAKING NEWS
PHIL SALT WILL NOT BE PLAYING FOR RCB TONIGHT!
With Rajat Patidar also missing, RCB will be without their key players.
This is going to be tough for the team! #RCBvsPBKS #iplfinal2025 #ViratKohli pic.twitter.com/ZnnF9BVDDp
— Reenu yadav (@reenu26451) June 3, 2025
ಹೌದು, ಆರ್‌ಸಿಬಿಯ ಅದ್ಭುತ ಆರಂಭಿಕ ಬ್ಯಾಟ್ಸ್‌ಮನ್ ಫಿಲ್ ಸಾಲ್ಟ್(Phil Salt) ಫೈನಲ್ ಮ್ಯಾಚ್ ನಿಂದ ಹೊರ ಬಿದ್ದಿದ್ದಾರೆ. ಅವರು ತಮ್ಮ ಮೊದಲ ಮಗುವಿನ ಜನನದ ನಿರೀಕ್ಷೆಯಲ್ಲಿ ದಿಢೀರ್ ಇಂಗ್ಲೆಂಡ್‌ಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಫೈನಲ್‌ಗೂ ಮುನ್ನ ಸೋಮವಾರ ನಡೆದಿದ್ದ ತಂಡದ ಅಂತಿಮ ಹಂತದ ತರಬೇತಿ ಅವಧಿಯಲ್ಲಿ ಸಾಲ್ಟ್ ಕಾಣಿಸಿಕೊಂಡಿರಲಿಲ್ಲ. ಇದೀಗ ವರದಿಗಳ ಪ್ರಕಾರ ಅವರು ತವರಿಗೆ ಮರಳಿದ್ದಾರೆ ಎನ್ನಲಾಗಿದೆ.
ಇನ್ನು ಫಿಲ್ ಸಾಲ್ಟ್ ಅಲಭ್ಯರಾದರೆ ಅವರ ಬದಲು ನ್ಯೂಜಿಲ್ಯಾಂಡ್‌ನ ಸ್ಫೋಟಕ ಬ್ಯಾಟರ್ ಟಿಮ್ ಸೀಫರ್ಟ್ ಅವರು ವಿರಾಟ್ ಜತೆ ಆರಂಭಿಕನಾಗಿ ಕಣಕ್ಕಿಳಿಯಬಹುದು. ಇಲ್ಲವಾದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಇನಿಂಗ್ಸ್ ಆರಂಭಿಸಬಹುದು.
Comments are closed.