Mangaluru: ಬ್ಯಾಂಕ್‌ನಲ್ಲಿ ಅಗ್ನಿ ಅವಘಡ: ಕಂಪ್ಯೂಟರ್‌ ವಿವಿಧ ಉಪಕರಣಗಳಿಗೆ ಹಾನಿ

Share the Article

Mangaluru: ಶಾರ್ಟ್‌ ಸರ್ಕ್ಯೂಟ್‌ನಿಂದ ರಥಬೀದಿಯಲ್ಲಿರುವ ಬ್ಯಾಂಕ್‌ ಒಂದರಲ್ಲಿ ಮಂಗಳವಾರ ಅಗ್ನಿ ಅವಘಡ ಸಂಭವಿಸಿದೆ. ರಥಬೀದಿಯಲ್ಲಿರುವ ಬ್ಯಾಂಕ್‌ ಶಾಖೆಯೊಂದರ ಮೊದಲ ಮಹಡಿಯಲ್ಲಿರುವ ಹೆಲ್ಪ್‌ ಡೆಸ್ಕ್‌ ವಿಭಾಗದ ಬಳಿ ಶಾರ್ಟ್‌ ಸರ್ಕ್ಯೂಟ್‌ ನಿಂದ ದಟ್ಟ ಹೊಗೆ ಕಾಣಿಸಿಕೊಂಡಿದೆ.

ಬ್ಯಾಂಕ್‌ ಸಿಬ್ಬಂದಿ ಕೂಡಲೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು, ಪಾಂಡೇಶ್ವರ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಎಸಿ ಕೊಠಡಿಯಲ್ಲಿ ಹೊಗೆ ಹೊರ ಹೋಗಲು ವ್ಯವಸ್ಥೆ ಇಲ್ಲದೆ ಬಳಿಕ ಅಗ್ನಿ ಶಾಮಕ ಸಿಬ್ಬಂದಿ ಬಳಸಿ ಹೊಗೆ ಹೊರ ಹೋಗಲು ವ್ಯವಸ್ಥೆ ಮಾಡಿಕೊಡಲಾಗಿದೆ. ಬೆಂಕಿ ಹತೋಟಿಗೆ ಬಂದಿದೆ.

ಈ ಅಗ್ನಿ ಅವಘಡದಿಂದ ಬ್ಯಾಂಕ್‌ನಲ್ಲಿದ್ದ ಕಂಪ್ಯೂಟರ್‌ ಸಹಿತ ವಿವಿಧ ಉಪಕರಣಗಳಿಗೆ ಹಾನಿ ಉಂಟಾಗಿದೆ.

Comments are closed.