CM Siddaramiah : ‘ತಿ*…. ಮುಚ್ಕೊಂಡ್ ಬಾರಯ್ಯ..’ – ಸಂಪುಟದ ಮಂತ್ರಿಗೆ ಸಿಎಂ ಸಿದ್ದು ಆವಾಜ್ !!

Share the Article

C M Siddaramiah : ರಾಜಕೀಯ ನಾಯಕರುಗಳು ಸಾರ್ವಜನಿಕ ಸ್ಥಳಗಳಲ್ಲಿ ಎಷ್ಟೇ ಜಾಗರೂಕರಾಗಿ ಮಾತನಾಡಿದರು ಕೂಡ ಕೆಲವೊಮ್ಮೆ ತಮ್ಮ ಹಳ್ಳಿಯ ಸೊಗಡಿನ ಮಾತುಗಳಿಂದಾಗಿ ಕೆಲವೊಂದು ಆಕ್ರೋಶಕ್ಕೆ ಗುರಿಯಾಗುವ ಪದಗಳು ನುಸುಳಿ ಬರುವುದುಂಟು. ಆತ್ಮೀಯತೆಯಿಂದಲ ಮಾತನಾಡಿದಾಗಲೂ ಕೂಡ ಇದು ಬಾರಿ ವಿವಾದವಾಗುತ್ತದೆ. ಈ ರೀತಿ ಅನೇಕ ರಾಜಕೀಯ ನಾಯಕರು ಮುಜುಗರಕ್ಕೊಳಗಾಗಿದ್ದಾರೆ. ಅಂತೆಯೇ ಇದೀಗ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ತಮ್ಮ ಸಂಪುಟದ ಮಂತ್ರಿ ಒಬ್ಬರಿಗೆ ‘ತಿ…. ಮುಚ್ಕೊಂಡ್ ಬಾರಯ್ಯ’ ಎಂದು ಹೇಳಿದ್ದಾರೆ ಎನ್ನಲಾದ ಸುದ್ದಿಯೊಂದು ಬಂದಿದೆ.

ಹೌದು, ಸಿಎಂ ಸಿದ್ದರಾಮಯ್ಯನವರು ತಮ್ಮ ಸಚಿವ ಸಂಪುಟ ಪುನಾರಚನೆಗೆ ಮುಂದಾಗಿದ್ದಾರೆ. ಹೀಗಾಗಿ ಸಂಪುಟ ಪುನಾರಚನೆ ಬಗ್ಗೆ ಚರ್ಚಿಸುವ ಸಲುವಾಗಿ ಆ ಪ್ರಭಾವಿ ಮಂತ್ರಿಯೊಬ್ಬರಿಗೆ ಕರೆ ಮಾಡಿ ತಮ್ಮ ಕಚೇರಿಗೆ ಬರಲು ಸೂಚಿಸಿದ್ದರು. ಆದ್ರೆ ಆ ಪ್ರಭಾವಿ ಮಂತ್ರಿ, ತಮ್ಮ ಸೀಟು ಉಳಿಸಿಕೊಳ್ಳುವ ಸಲುವಾಗಿ ತಮ್ಮ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದರು. ಇದೇ ವೇಳೆಗೆ ಸಿಎಂ ಕಾಲ್ ಬಂದಿದ್ದರಿಂದ ದೌಡಾಯಿಸಿ ಬೆಂಗಳೂರಿಗೆ ಆಗಮಿಸಿದ್ದರು. ಆದರೆ ಅಷ್ಟರಲ್ಲಾಗಲೇ ಸಂಜೆ ಆಗಿತ್ತು. ಸಂಜೆ ಆಯ್ತಲ್ಲ ಅಂತ ಆ ಮಿನಿಸ್ಟರ್ ಮನೆಗೆ ಹೋಗಲೇ ಇಲ್ಲ.

ಆದ್ರೆ ಬೆಳಿಗ್ಗೆಯೂ ಸಿಎಂ ಕಚೇರಿಗೆ ಹೋಗಲು ಆ ಮಿನಿಸ್ಟರ್ ಹೆದರಿದ್ದರು. ಎಲ್ಲಿ ಸಿಎಂ ಸಾಹೇಬ್ರು ಬೈತಾರೋ ಅಂತ ಹೆದರಿ ಮನೆಯಲ್ಲೇ ಇದ್ರು. ಫೋನ್ ಮಾಡಿ ಹೇಳಿದ್ರೂ ಕೂಡ ಆ ಮಿನಿಸ್ಟರ್ ಬಂದಿಲ್ಲ ಅಂತ ಸಿಟ್ಟಾದ ಸಿದ್ದರಾಮಯ್ಯ ಮತ್ತೊಮ್ಮೆ ಫೋನ್ಮಾಡಿ ಕ್ಲಾಸ್ ತಗೊಂಡಿದ್ದಾರೆ.. ತಿ.. ಮುಚ್ಕಂಡ್ ಬೇಗ ಬಾರಯ್ಯ ಅಂತಲೇ ಗದರಿದ್ದಾರೆ. ಸಿಎಂ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಳ್ತಿದ್ದಂತೆ ಹೆದರಿ ಆ ಮಂತ್ರಿ ದೌಡಾಯಿಸಿ ಸಿಎಂ ಕಚೇರಿಗೆ ಹೋಗಿದ್ರಂತೆ.

Comments are closed.