Holiday : ನಾಳೆ RCB ಫೈನಲ್ ಮ್ಯಾಚ್ – ಸರ್ಕಾರದಿಂದ ಸಾರ್ವತ್ರಿಕ ರಜೆ ಘೋಷಣೆ?

Holiday : ನಾಳೆ ಐಪಿಎಲ್ ನ ಫೈನಲ್ ಮ್ಯಾಚ್ ನಡೆಯಲಿದೆ. ನಾಳೆಯ ಮ್ಯಾಚ್ ಗೋಸ್ಕರ ಎಲ್ಲರು ತುದಿಗಾಲಿನಲ್ಲಿ ನಿಂತಿದ್ದಾರೆ. ಯಾಕೇಂಡೆ ಸುಮಾರು 18 ವರ್ಷಗಳಿಂದ ಆರ್ಸಿಬಿ ಅಭಿಮಾನಿಗಳು ಕಾಯ್ತಾ ಇರುವಂತಹ ದಿನ ಬಂದಿದೆ. ಕಾರಣ ಆರ್ಸಿಬಿ ಫೈನಲ್ ತಲುಪಿದ್ದು, ಅಭಿಮಾನಿಗಳು ಕಪ್ ಈ ಬಾರಿ ಬಂದೇ ಬರುತ್ತೆ ಅನ್ನೋ ವಿಶ್ವಾಸದಲ್ಲಿದ್ದಾರೆ. ಹೀಗಾಗಿಯೇ ಅಭಿಮಾನಿಗಳೆಲ್ಲಾ ಸಿಎಂ ಸಿದ್ದರಾಮಯ್ಯ ಅವರಿಗೆ ಒಂದು ಮನವಿಯನ್ನ ಮಾಡಿದ್ದಾರೆ.

ಹೌದು, ನಾಳೆ ಆರ್ಸಿಬಿ ವರ್ಸಸ್ ಪಂಜಾಬ್ ಪಂದ್ಯ ನಡೆಯಲಿದೆ. ಈ ಬಾರಿಯ ಆಟದಲ್ಲಿ ಒಳ್ಳೆಯ ಪ್ರದರ್ಶನ ನೀಡಿದ್ದು, ಫ್ಲೇ ಆಫ್ ನಲ್ಲಿ ಪಂಜಾಬ್ ವಿರುದ್ಧ ಪಂದ್ಯವಾಡಲಿದ್ದು, ನಾಳೆ ಒಂದು ದಿನ ಸಾರ್ವತ್ರಿಕ ರಜೆ ಘೋಷಣೆ ಮಾಡುವಂತೆ ಮನವಿ ಮಾಡಿದ್ದಾರೆ. ಈ ಮನವಿಯನ್ನ ಸಿಎಂ ಸಿದ್ದರಾಮಯ್ಯ ಅವರು ಒಪ್ಪಿಕೊಳ್ಳುತ್ತಾರಾ ನೋಡಬೇಕಿದೆ.
ಅಲ್ಲದೆ ಬೆಳಗಾವಿ ಜಿಲ್ಲೆಯ ಗೋಕಾಕ್ ಮೂಲದ ಶಿವಾನಂದ ಮಲ್ಲನ್ನವರ್ ಎಂಬ ಯುವಕ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಶೇಷ ಪತ್ರದ ಮೂಲಕ ಬೇಡಿಕೆಯೊಂದನ್ನ ಇಟ್ಟಿದ್ದಾರೆ. ಈ ಪತ್ರದಲ್ಲಿ ರಾಜ್ಯೋತ್ಸವದ ರೀತಿಯಲ್ಲಿ ಆರ್ಸಿಬಿ ಫ್ಯಾನ್ಸ್ ಹಬ್ಬದ ರೀತಿಯಲ್ಲಿ ಆಚರಣೆಗೆ ಅವಕಾಶ ನೀಡಿ ಎಂದು ಪತ್ರದಲ್ಲಿ ವಿಶೇಷ ಮನವಿಯನ್ನ ಮಾಡಿದ್ದಾರೆ. ಆರ್ಸಿಬಿ ಕಪ್ ಗೆದ್ದರೆ ಆದ ದಿನವನ್ನ ʻಆರ್ಸಿಬಿ ಫ್ಯಾನ್ಸ್ ಹಬ್ಬʼದ ದಿನನ್ನಾಗಿ ಘೋಷಿಸಿ. ಜೊತೆಗೆ ಒಂದು ದಿನ ಸಾರ್ವತ್ರಿಕ ರಜೆ ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರದಲ್ಲಿ ಮನವಿ ಮಾಡಲಾಗಿತ್ತು. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವತ್ರಿಕ ರಜೆ ಘೋಷಣೆ ಮಾಡುತ್ತಾರಾ ಎಂಬುದನ್ನ ಕಾದುನೋಡ್ಬೇಕಾಗಿದೆ.
ಅಂದಹಾಗೆ ಬರೋಬ್ಬರಿ 18 ಸೀಸನ್ಗಳಿಂದ ಮೂರು ಬಾರಿ ಐಪಿಎಲ್ನಲ್ಲಿ ಫೈನಲ್ ಪ್ರವೇಶಿಸಿರುವ ಆರ್ಸಿಬಿ, ಒಮ್ಮೆಯೂ ಟ್ರೋಫಿ ಗೆಲ್ಲುವ ಕನಸು ಈಡೇರಿಸಿಕೊಳ್ಳಲಿಲ್ಲ. 2009ರ ಐಪಿಎಲ್ ಸೀಸನ್ನಲ್ಲೇ ಕಪ್ ಗೆಲ್ಲುವ ಅವಕಾಶ ಹೊಂದಿದ್ದ ಅನಿಲ್ ಕುಂಬ್ಳೆ ನಾಯಕತ್ವದ ಆರ್ಸಿಬಿ, ಅಂದುಮುಗ್ಗರಿಸಿ ಟ್ರೋಫಿ ಕೈಚೆಲ್ಲಿತ್ತು. ಪ್ರಸಕ್ತ ಸೀಸನ್ನಲ್ಲಿ ಫೈನಲ್ಗೆ ಎಂಟ್ರಿ ನೀಡಿರುವ ಆರ್ಸಿಬಿ, ಅದೃಷ್ಟದ ಲೆಕ್ಕಾಚಾರದಲ್ಲಿ ಪ್ರತಿ ಮ್ಯಾಚ್, ಪ್ರತಿ ಕಂಡೀಷನ್ಸ್ನಲ್ಲಿ ಅದ್ಭುತ ಆಟವಾಡಿದೆ. ಈಗಾಗಲೇ ಆರ್ಸಿಬಿ ಗೆಲುವು ಸನಿಹದಲ್ಲಿದೆ ಎಂದು ಆರ್ಸಿಬಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
Comments are closed.