JEE ADVANCE: ಜೆಇಇ ಅಡ್ವಾನ್ಸ್ ಪರೀಕ್ಷೆ ಫಲಿತಾಂಶ: ರಂಜಿತ್ ಗುಪ್ತ ದೇಶಕ್ಕೆ ಮೊದಲ ರ‌್ಯಾಂಕ್

Share the Article

JEE ADVANCE: ಭಾರತೀಯ ತಂತ್ರಜ್ಞಾನ ಸಂಸ್ಥೆ(IIT) ಕಾನ್ಪುರ್ ಇಂದು ಪ್ರಕಟಗೊಳಿಸಿದ ಜಂಟಿ ಪ್ರವೇಶ ಪರೀಕ್ಷೆ ಅಡ್ವಾನ್ಸ್ಡ್ ಪರೀಕ್ಷೆ 2025 ರ ಫಲಿತಾಂಶದಲ್ಲಿ ರಂಜಿತ್ ಗುಪ್ತ ಪ್ರಥಮ ರ‌್ಯಾಂಕ್ ಗಳಿಸಿದ್ದಾರೆ.

ಮೇ. 18 ರಂದು ನಡೆದ ಈ ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ರಂಜಿತ್ ಗುಪ್ತ 360 ಕ್ಕೆ 332 ಅಂಕ ಗಳಿಸುವ ಮೂಲಕ ಪ್ರಥಮ ಸ್ಥಾನದಲ್ಲಿದ್ದಾರೆ. ಈ ಪರೀಕ್ಷೆಯಲ್ಲಿ ಪೇಪರ್ 1 ಹಾಗೂ ಪೇಪರ್ 2 ರಲ್ಲೂ ಗಣಿತ, ಭೌತಶಾಸ್ತ್ರ, ರಾಸಾಯನಶಾಸ್ತ್ರದ ಒಟ್ಟು ಅಂಕಗಳ ಆಧಾರದ ಮೇಲೆ ಸ್ಥಾನಗಳನ್ನು ನಿರ್ಧರಿಸಲಾಗಿದೆ.

ರಂಜಿತ್ ಗುಪ್ತ ಮೊದಲ ಸ್ಥಾನ ಪಡೆದರೆ, ಸಕ್ಷಮ್ ಜಿಂದಾಲ್ 332 ಅಂಕ ಗಳಿಸುವ ಮೂಲಕ 2ನೆ ಸ್ಥಾನವನ್ನು ಗಳಿಸಿರುತ್ತಾರೆ.

Comments are closed.