ವಿಶ್ವದ ಚೆಸ್ ನಂ.1 ಚತುರನಿಗೆ ಸೋಲುಣಿಸಿದ ಗುಕೇಶ್ – ಟೇಬಲ್ ಗುದ್ದಿದ ಕಾರ್ಲ್ ಸನ್!

Share the Article

2025ರ ನಾರ್ವೆ ಚೆಸ್ ಪಂದ್ಯಾವಳಿಯಲ್ಲಿ ಭಾರತೀಯ ಪ್ರತಿಭೆ ಡಿ ಗುಕೇಶ್ ಅವರು ಮತ್ತೊಂದು ಸಾಧನೆ ಮಾಡಿದ್ದಾರೆ. ಗುಕೇಶ್ ಮ್ಯಾಗ್ನಸ್ ಕಾರ್ಲ್ಸನ್ ರನ್ನು ಸೋಲಿಸಿದ್ದು, ಇದು ವಿಶ್ವದ ನಂ. 1 ಆಟಗಾರನ ವಿರುದ್ಧ ಅವರ ಮೊದಲ ಶಾಸ್ತ್ರೀಯ ಗೆಲುವಾಗಿದೆ. ಆಟದ ಸಂದರ್ಭ ಗುಕೇಷ್ ನಡೆಸಿದ ಮೂವ್ ಗೆ ಬೆಚ್ಚಿ ಬಿದ್ದ ಕಾರ್ಲ್ ಸನ್, ಟೇಬಲ್ ಅನ್ನು ಗುದ್ದಿ ಸೋಲೊಪ್ಪಿಕೊಂಡರು.

ಪಂದ್ಯದ ಆರಂಭದಲ್ಲಿ ಆಟದ ಮೇಲೆ ಬಹುಪಾಲು ನಿಯಂತ್ರಣ ಕಾಯ್ದುಕೊಂಡಿದ್ದ ಮ್ಯಾಗ್ನಸ್ ಬಳಿಕ ಅಂತಿಮ ಹಂತದಲ್ಲಿ ಬಹುದೊಡ್ಡ ತಪ್ಪುಗಳನ್ನ ಮಾಡಿದರು. ಇದರಿಂದಾಗಿ 19 ವರ್ಷದ ಭಾರತೀಯ ಗ್ರಾಂಡ್ ಮಾಸ್ಟರ್ ಗುಕೇಶ್ ರಿಗೆ ಕಾರ್ಲ್ ಸನ್ ರ ಗೆಲುವು ಸುಲಭವಾಯಿತು.

ತನ್ನ ಸೋಲು ಖಚಿತವಾಗುತ್ತಿದ್ದಂತೆಯೇ ಮ್ಯಾಗ್ನಸ್ ಶಾಕ್ ಆಗಿದ್ದರು. ತಕ್ಷಣ ತಮ್ಮ ಮೇಲೆ ನಿಯಂತ್ರಣ ಕಳೆದುಕೊಂಡು ಟೇಬಲ್ ಗೆ ಗುದ್ದಿದ್ದಲ್ಲದೇ ಓಹ್ ಮೈ ಗಾಡ್ ಎಂದು ಕೂಗಿದರು. ಟೇಬಲ್ಲಿನ ಚೆನ್ ಪಾನ್ ಗಳು ಚೆಲ್ಲಾಪಿಲ್ಲಿ ಆದವು. ತಕ್ಷಣ ಗುಕೆಷ್ ಗೆ ಷೇಕ್ ಹ್ಯಾಂಡ್ ನೀಡಿ ಕಾರ್ಲ್ ಸನ್ ಶತಪಥ ಓಡಾಡಿದರು.

ಟೇಬಲ್ಲಿಗೆ ಗುದ್ದಿದಾಗ ಒಂದು ಕ್ಷಣಕ್ಕೆ ಗುಕೇಶ್ ಗೆ ಟೇಬಲ್ ನಿಂದ ದೂರ ಸರಿದರು. ನಂತರ ಮತ್ತೆ ಗುಕೇಶ್ ಪಕ್ಕ ಬಂದ ಮ್ಯಾಗ್ನಸ್ ಗುಕೇಶ್ ರ ಬೆನ್ನು ತಟ್ಟಿ ಅಲ್ಲಿಂದ ಹೊರಟರು. ಹತಾಶೆ ಕಾರ್ಲ್ ಸನ್ ಮುಖದಲ್ಲಿತ್ತು. ಗುಕೇಶ್ ಮೌನದಲ್ಲೇ ಗೆಲುವನ್ನು ಆಶ್ಚರ್ಯಪಟ್ಟುಕೊಂಡು ಎಂಜಾಯ್ ಮಾಡಿದ್ದರು.

Comments are closed.