Kamal Haasan: ಕಮಲ್ ಹಾಸನ್ ಗೆ ಕನ್ನಡದ ಪುಸ್ತಕ ನೀಡಿದ ಕನ್ನಡದ ಕಿರುತೆರೆ ನಟಿ

Kamal Haasan:ಇತ್ತೀಚೆಗೆ ಕನ್ನಡದ ವಿರುದ್ಧವಾಗಿ ಒಂದು ಹೇಳಿಕೆ ನೀಡಿ ಸುದ್ದಿಯಲ್ಲಿರುವ ಹಿರಿಯ ನಟ ಕಮಲ್ ಹಾಸನ್ ಅವರ ಚಿತ್ರ ಥಗ್ ಲೈಫ್ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದೆ. ಕ್ಷಮೆ ಕೇಳದಿದ್ದರೆ ಬಿಡುಗಡೆಗೆ ಬಿಡುವುದಿಲ್ಲ ಎಂದು ಕನ್ನಡ ಪರ ಹೋರಾಟದ ಸಂಸ್ಥೆಗಳು ಎಚ್ಚರಿಕೆ ನೀಡಿವೆ.

ಇದಾಗ್ಯೂ ಕೂಡ ಕನ್ನಡದ ಮೇಲಿನ ಪ್ರೀತಿಯಿಂದ ತಾನು ಆ ರೀತಿಯಾಗಿ ಮತನಾಡಿದ್ದೇನೆ, ತಾನು ತಪ್ಪು ಮಾಡಿಲ್ಲ ಹಾಗಾಗಿ ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ ಕಮಲ್ ಹಾಸನ್.
ಈ ನಡುವೆ ಕನ್ನಡ ಕಿರುತೆರೆ ನಟಿ,ನಿರ್ದೇಶಕಿ, ಲೇಖಕಿ, ಗಾಯಕಿ ಆದಂತಹ ರಂಜನಿ ರಾಘವನ್ ಕಮಲ್ ಹಾಸನ್ ಗೆ ಕನ್ನಡದ ಪುಸ್ತಕಗಳನ್ನು ನೀಡಿದ್ದು ಭಾರಿ ವೈರಲ್ ಆಗಿದೆ. ಕಮಲ್ ಸರ್ ಗೆ ಕನ್ನಡ ಪುಸ್ತಕ ಎಂದು ಆಕೆ ಬರೆದುಕೊಂಡಿದ್ದು, ಅದನ್ನು ನಗುತ್ತಲೇ ಹಾಸನ್ ಸ್ವೀಕರಿಸಿದ್ದಾರೆ.
Comments are closed.