Mangaluru: ಲೋಕಾಯುಕ್ತರಿಗೆ ಲಂಚ ನೀಡಲು ಹೋಗಿದ್ದ ಅಧಿಕಾರಿ ಅರೆಸ್ಟ್

Share the Article

Mangaluru: ತಮ್ಮ ಮೇಲೆ ದಾಳಿ ಮಾಡದಂತೆ ಲೋಕಾಯುಕ್ತರಿಗೆ ಲಂಚ ನೀಡಲು ಹೋದ ಅಧಿಕಾರಿಯೋರ್ವ ಇದೀಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಇಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ಸುಮಾರು ಬೆಳಿಗ್ಗೆ 11:15 ಕ್ಕೆ ಕೋಟೆಕಣಿ ಪ್ರಶಾಂತ್ ಆಯಿಲ್ ಇಂಡಸ್ಟ್ರೀಸ್ ಮಾಲೀಕ ಪ್ರವೀಣ್ ನಾಯ್ಕ್ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯ ನಿಯಂತ್ರಕರಾದ ಗಜೇಂದ್ರ ಬಂದಿರುತ್ತಾರೆ.

ತನ್ನ ಹಾಗೂ ತನ್ನ ಇಲಾಖೆ ವಿರುದ್ಧ ಯಾವುದೇ ರೀತಿಯ ದೂರು ದಾಖಲಿಸಿಬಾರದು, ತಮಗೆ 3 ತಿಂಗಳಿಗೊಮ್ಮೆ 25,000 ರೂ ಗಳನ್ನು ನೀಡುವುದಾಗಿ ಲಂಚದ ಆಮಿಷ ಒಡ್ಡಿದ್ದು, ಗಜೇಂದ್ರ ಅವರ ಮೇಲೆ ದೂರು ದಾಖಲಾಗಿದೆ. ಹಾಗೂ ಅವರನ್ನು ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

Comments are closed.