Gadaga: ಬಾಲಕಿಯರಿಗೆ ಅಶ್ಲೀಲ ಸಂದೇಶ ಕಳಿಸಿದ ಬಾಲಕರು: ಬಾಲಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು

Share the Article

Gadaga: ಬಾಲಕಿಯರ ಮೊಬೈಲ್ ಗೆ ಅಶ್ಲೀಲ ಸಂದೇಶ ಕಳಿಸಿದ್ದಾರೆ ಎಂಬ ಆರೋಪ ಮಾಡಿ ಗ್ರಾಮ ಪಂಚಾಯತ್ ಎದುರೇ ಕಂಬಕ್ಕೆ ಕಟ್ಟಿ ಬಾಲಕರನ್ನ ಥಳಿಸಿದ ಘಟನೆ ಗದಗ ಜಿಲ್ಲೆಯ ಬನಹತ್ತಿ ಗ್ರಾಮದಲ್ಲಿ ನಡೆದಿದೆ.

ಮೇ 28 ರಂದು ಈ ಘಟನೆ ನಡೆದಿದ್ದು, ಥಳಿಸಿದಂತಹ 55 ಜನರ ಮೇಲೆ ದೂರು ದಾಖಲಾಗಿರುತ್ತದೆ. ಈ ಪೈಕಿ ಈಗಾಗಲೇ 10 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೂ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧವೂ ದೂರು ದಾಖಲಾಗಿದ್ದು, ಈ ಪೈಕಿ ಒಬ್ಬ ಬಾಲಕ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇನ್ನಿಬ್ಬರು ನಾಪತ್ತೆಯಾಗಿದ್ದಾರೆ.

ಈ ಎರಡೂ ದೂರುಗಳನ್ನು ದೌರ್ಜನ್ಯ ಹಾಗೂ ಪೋಕ್ಸೋ ಕಾಯ್ದೆಯಡಿ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಇನ್ನೂ ಬನಹಟ್ಟಿ ಗ್ರಾಮದ ಸುರಕ್ಷತೆಗಾಗಿ DSP, CPI, PSI ಸೇರಿದಂತೆ ಸಿವಿಲ್ ಪಡೆಗಳನ್ನು ನಿಯೋಜಿಸಲಾಗಿದೆ.

Comments are closed.