ಯುವತಿ ಮೇಲೆ ಬಸ್ ಹತ್ತಿಸಲು ನೋಡಿದ BMTC ಬಸ್ ಚಾಲಕ: ಕೂದಲೆಳೆಯಿಂದ ಯುವತಿ ಪಾರು, Viral Video

ಬೆಂಗಳೂರು: ಬೆಂಗಳೂರು ನಗರದ ಕಸ್ತೂರ್ ಬಾ ರಸ್ತೆಯ ಕ್ಷೀನ್ಸ್ ಜಂಕ್ಷನ್ ಬಳಿ ಯುವತಿ ಮೇಲೆ BMTC ಚಾಲಕ ಬಸ್ ಹತ್ತಿಸಲು ಪ್ರಯತ್ನಿಸಿದ ಘಟನೆ ನಡೆದಿದೆ. ಈ ಘಟನೆಯು ಕಳೆದ ಮೇ 23ರ ಸಂಜೆ 5.40ರ ಸುಮಾರಿಗೆ ನಡೆದಿದ್ದು ಇದೀಗ ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಬಿಎಂಟಿಸಿ ಬಸ್ ಚಾಲಕ ಮತ್ತು ಕಾರಿನಲ್ಲಿದ್ದ ಯುವತಿ ಮಧ್ಯೆ ಸಣ್ಣ ಗಲಾಟೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಾರಿನಿಂದ ಇಳಿದ ಯುವತಿ ಚಾಲಕನನ್ನು ಪ್ರಶ್ನೆ ಮಾಡಲು ಮುಂದಾದಾಗ ಚಾಲಕ ಆಕೆಯ ಮೇಲೆ ಬಸ್ ನುಗ್ಗಿಸಿದ್ದಾನೆ. ಆದರೆ ಯುವತಿ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದಾಳೆ. ಈ ವಿಡಿಯೋ ಇದೀಗ ತಡವಾಗಿ ವೈರಲಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಷಯ ತಿಳಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರ ಸೂಚನೆಯ ಮೇರೆಗೆ ಇದೀಗ ಚಾಲಕ ಪ್ರಶಾಂತ್ ಎಂಬಾತನನ್ನು ಬಿಎಂಟಿಸಿ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

Murder on the Streets? BMTC Driver Caught on Camera Attempting to Crush Pedestrian
In yet another deeply troubling incident involving a BMTC (Bangalore Metropolitan Transport Corporation) bus, shocking footage has emerged of a reckless act by the driver of bus number KA57F2046,… pic.twitter.com/oZRvsisICM
— Karnataka Portfolio (@karnatakaportf) June 1, 2025
Comments are closed.