Bengaluru : ಯುವತಿಯ ಮೇಲೆ ಬಸ್ ಹತ್ತಿಸಲು ಮುಂದಾದ BMTC ಚಾಲಕ !! ಭಯಾನಕ ವಿಡಿಯೋ ವೈರಲ್

Share the Article

Bengaluru : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಚಾಲಕ ಯುವತಿ ಮೇಲೆ ಬಸ್​ ಹತ್ತಿಸಲು ಯತ್ನಿಸಿ, ಯುವತಿಯು ಕೂದಲೆ ಅಂತರದಲ್ಲಿ ಬಚಾವ್ ಆಗಿರುವಂತಹ ಅಘಾತಕಾರಿ ಘಟನೆ ಘಟನೆ ಕಸ್ತೂರ್ಬಾ ರಸ್ತೆಯ ಕ್ಷೀನ್ಸ್​ ಜಂಕ್ಷನ್​ (ಎಂ.ಜಿ.ರಸ್ತೆ) ಬಳಿ ನಡೆದಿದೆ.

ಮೇ 23ರ ಸಂಜೆ 5.40ಕ್ಕೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಿಎಂಟಿಸಿ ಬಸ್​ ಚಾಲಕ (BMTC Bus Driver) ಮತ್ತು ಯುವತಿ ನಡುವೆ ಗಲಾಟೆಯಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೀನ್ಸ್​ ಜಂಕ್ಷನ್​ನಲ್ಲಿ ಕಾರಿನಿಂದ ಇಳಿದ ಯುವತಿ ಬಿಎಂಟಿಸಿ ಬಸ್ ಚಾಲಕನನ್ನು ಪ್ರಶ್ನೆ ಮಾಡುತ್ತಿದ್ದರು. ಆದರೆ, ಚಾಲಕ ಯುವತಿಯ ಮೇಲೆ​ ಬಸ್​ ನುಗ್ಗಿಸಿದ್ದಾರೆ. ಯುವತಿ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದಾರೆ. ಸ್ವಲ್ಪ ಯಾಮಾರಿದ್ದರು ಯುವತಿಯ ಜೀವಕ್ಕೆ ಕುತ್ತು ಬರುತ್ತಿತ್ತು. ಚಾಲಕನ ಕೃತ್ಯ ಕಂಡು ಜನರು ಬೆಚ್ಚಿಬಿದ್ದಿದ್ದಾರೆ.

ಅಂದಹಾಗೆ ವೈರಲ್ ಆದ ವಿಡಿಯೋದಲ್ಲಿ ಬಿಎಂಟಿಸಿ ಬಸ್ ಪಕ್ಕ ಕಾರಿನಲ್ಲಿದ್ದ ಯುವತಿ ಕಾರಿನಿಂದ ಇಳಿದು ಬಸ್ ಚಾಲಕನನ್ನು ಪ್ರಶ್ನೆ ಮಾಡಿದ್ದಾಳೆ. ಯಾವ ವಿಚಾರವಾಗಿ ಯುವತಿ ಪ್ರಶ್ನೆ ಮಾಡಿದ್ದಾಳೆ ಎಂಬ ಕುರಿತು ಸ್ಪಷ್ಟತೆ ದೊರೆತಿಲ್ಲ. ಬಳಿಕ ಬಸ್ ಚಾಲಕ ಮತ್ತು ಯುವತಿ ನಡುವೆ ಜಗಳ ನಡೆದು ಬಸ್ ಚಾಲಕನನ್ನು ಪ್ರಶ್ನೆ ಮಾಡಲು ಯುವತಿ ಸಿಗ್ನಲ್‌ನಲ್ಲಿ ಬಸ್ ಅಡ್ಡಗಟ್ಟಿದ್ದಳು. ಆದರೆ, ಯುವತಿಯನ್ನು ಲೆಕ್ಕಿಸದೇ ಚಾಲಕ ಬಸ್ ನುಗ್ಗಿಸಲು ಮುಂದಾಗಿದ್ದಾನೆ. ಸ್ವಲ್ಪದರಲ್ಲೇ ಯುವತಿ ಪಾರಾಗಿದ್ದು, ಚಾಲಕನ ಕೃತ್ಯದಿಂದ ಜನ ಬೆಚ್ಚಿಬಿದ್ದಿದ್ದಾರೆ.

ಸಧ್ಯ ಯುವತಿ ಮೇಲೆ ಬಿಎಂಟಿಸಿ ಬಸ್ ಹತ್ತಿಸಲು ಮುಂದಾಗಿದ್ದ ಚಾಲಕ ಪ್ರಶಾಂತ್ ಅವರನ್ನು ಅಮಾನತುಗೊಳಿಸಲಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ಮೇರೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

Comments are closed.