Workers protest: ಅರೆ ಕಾಲಿಕ ನೌಕರರ ಮುಷ್ಕರದ ಎಫೆಕ್ಟ್ – ಆರ್ಜಿ ಗ್ರಾಮಕ್ಕೆ ನೊಣಗಳ ಮುತ್ತಿಗೆ

Share the Article

Workers protest: ವಿರಾಜಪೇಟೆಯ ಪುರಸಭೆಯ ಅರೆಕಾಲಿಕ ನೌಕರರ ಮುಷ್ಕರದ ಪರಿಣಾಮ ಕಸ ವಿಲೇವಾರಿ ಘಟಕದಲ್ಲಿ ತ್ಯಾಜ್ಯ ನಿರ್ವಹಣೆ ಆಗದೆ ಆರ್ಜಿ ಗ್ರಾಮದ ಸುತ್ತ ಮುತ್ತಲ್ಲಿನ ಒಂದು ಕಿಲೋ ಮೀಟರ್ ವ್ಯಾಪ್ತಿಗೆ ನೊಣಗಳು ಮುತ್ತಿಗೆ ಇಟ್ಟಿವೆ. ಸಮೀಪದಲ್ಲೇ ಬಡಮಕ್ಕಳ ಮುರಾರ್ಜಿ ದೇಸಾಯಿ ಹಾಸ್ಟೆಲ್ ಇದ್ದು ಹಾಸ್ಟೆಲ್ ನಲ್ಲಿ ನೊಣಗಳು ಆವರಿಸಿಕೊಂಡಿದೆ.

ಸಾಂಕ್ರಾಮಿಕ ರೋಗಗಳು ಹರಡದಂತೆ ಕನಿಷ್ಠ ಕ್ರಿಮಿನಾಶಕ ಬಳಸಿ ನೊಣಗಳ ನಿಯಂತ್ರಣ ಸದ್ಯದ ಮಟ್ಟಿಗೆ ಪುರಸಭೆ ಕೈಗೊತ್ತಿಕೊಳ್ಳಬೇಕಾಗಿದೆ. ಪುರಸಭಾ ಆಡಳಿತ ಮಂಡಳಿ ಮನೆಯಿಂದ ಹೊರಬಂದು ಆರ್ಜಿ ಗ್ರಾಮದ ಜನತೆಯ ಸಮಸ್ಯೆಗೆ ಪರಿಹಾರ ಹಾಗೂ ಮುಷ್ಕರ ಹೂಡಿರುವ ಕಾರ್ಮಿಕರ ಸಮಸ್ಯೆ ಬಗ್ಗೆ ಮುತುವರ್ಜಿ ವಹಿಸಿ ಸಮಸ್ಯೆ ಪರಿಹಾರ ಮಾಡಬೇಕಾಗಿದೆ.

Comments are closed.