Heavy rain: ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ರೌಂಡ್ಸ್ – ಮರ ಬಿದ್ದು ಮೃತಪಟ್ಟ ಮಹಿಳೆಯ ಕುಟುಂಬಸ್ಥರಿಗೆ ಪರಿಹಾರ ಪತ್ರ ಹಸ್ತಾಂತರ

Share the Article

Heavy rain: ಇತ್ತೀಚೆಗೆ ವಿರಾಜಪೇಟೆ ತಾಲೂಕಿನ ಅರ್ಜಿ ಗ್ರಾಮದಲ್ಲಿ ಮರ ಬಿದ್ದು ಮೃತಪಟ್ಟ ಮಹಿಳೆಯ ಕುಟುಂಬದವರಿಗೆ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರದ ಶಾಸಕ ಎಸ್ ಪೊನ್ನಣ್ಣರವರು ಪರಿಹಾರ ವಿತರಿಸಿದರು.

ಇತ್ತೀಚೆಗೆ ಸುರಿದ ಭಾರಿ ಮಳೆ ಹಾಗೂ ಗಾಳಿಗೆ ತನ್ನ ಮನೆಯ ಎದುರು ಕೆಲಸ ಮಾಡುತ್ತಿದ್ದ ಸಂದರ್ಭ, ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವನಪ್ಪಿದ ಘಟನೆ ನಡೆದಿತ್ತು. ಪರಿಹಾರ ವಿತರಿಸಿ ಮನೆಯವರಿಗೆ ಸಾಂತ್ವನ ಹೇಳಿದರು.

ಮೃತ ಗೌರಿಯವರು ಇಬ್ಬರು ಮಕ್ಕಳು ಅಗಲಿದ್ದು, ಮಾನ್ಯ ಶಾಸಕರ ಶಿಫಾರಸ್ಸಿನ ಮೇರೆಗೆ, ಮೃತರ ವಾರಿಸುದಾರರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿ ಅಡಿಯಲ್ಲಿ ಮಂಜೂರಾದ ₹ 5 ಲಕ್ಷದ ಹಕ್ಕು ಪತ್ರವನ್ನು ಮಾನ್ಯ ಶಾಸಕರು ನೀಡಿದರು.

ಈ ಸಂದರ್ಭದಲ್ಲಿ ವಿರಾಜಪೇಟೆ ತಾಲೂಕು ದಂಡಾಧಿಕಾರಿಗಳು, ಆರ್ ಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ವಿರಾಜಪೇಟೆ ಬ್ಲಾಕ ಕಾಂಗ್ರೆಸ್ ಅಧ್ಯಕ್ಷರು ಮತ್ತು ಕಾಂಗ್ರೆಸ್ ಮುಖಂಡರುಗಳು ಉಪಸಿತರಿದ್ದರು.

Comments are closed.