Bengaluru : ಸಿಂಪಲ್ ಪ್ರಶ್ನೆಗೆ ಉತ್ತರಿಸಲಾಗದೆ 40 ಲಕ್ಷ ರೂ ಸಂಬಳದ ಕೆಲಸ ಕಳೆದುಕೊಂಡ ಯುವಕ !! ಪ್ರಶ್ನೆ ಗೊತ್ತಾದ್ರೆ ನೀವೇ ಥಟ್ ಅಂತ ಉತ್ತರ ಹೇಳ್ತೀರಾ!!

Share the Article

Bengaluru : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೆಲಸಗಿಟ್ಟಿಸಿಕೊಂಡು ಜೀವನ ನಡೆಸುವುದೇ ಬಲು ಕಷ್ಟ. ಆದರೂ ಅನೇಕರು ನಿರಂತರ ಪ್ರಯತ್ನದಿಂದಾಗಿ, ತಮ್ಮ ಜ್ಞಾನದ ಮುಖಾಂತರ ಯಾವುದಾದರೂ ಒಂದು ಉದ್ಯೋಗವನ್ನು ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಸುಮ್ಮನೆ ಯಾರು ಕರೆದು ಕೆಲಸ ಕೊಡುವುದಿಲ್ಲ ಬೇರೆ ಬೇರೆ ರೀತಿಯ ಪರೀಕ್ಷೆಗಳನ್ನು ನಡೆಸಿ, ಸಂದರ್ಶನಗಳನ್ನು ನಡೆಸಿ ಸೆಲೆಕ್ಟ್ ಮಾಡುತ್ತಾರೆ. ಸಾಕಷ್ಟು ತಿಳುವಳಿಕೆ ಇದ್ದರೂ ಕೂಡ ಕೆಲವೊಮ್ಮೆ ಸಂದರ್ಶನದ ವೇಳೆ ನರ್ವಸ್ ಆಗಿ ಬಿಡುತ್ತೇವೆ. ಈ ಸಂದರ್ಭದಲ್ಲಿ ಎಲ್ಲವೂ ಮರೆತು ಹೋಗುತ್ತದೆ.

ವಿಶ್ವದ ಮೊದಲ ವೀರ್ಯಾಣು ರೇಸ್‌! ಹೇಗಿತ್ತು ಗೊತ್ತಾ ಸ್ಪರ್ಧೆ, ಗೆದ್ದವರು ಯಾರು?

ಅಂತೆಯೇ ಇಲ್ಲೊಬ್ಬ ಅಭ್ಯರ್ಥಿ ಸಿಂಪಲ್ ಪ್ರಶ್ನೆಗೆ ಉತ್ತರಿಸಲಾಗದೆ ಲಕ್ಷಾಂತರ ರೂಪಾಯಿ ಸಂಬಳದ ಕೆಲಸದಿಂದ ವಂಚಿತನಾಗಿದ್ದಾನೆ. ಈ ಸಂದರ್ಶನದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದೆ. ಹಾಗಿದ್ದರೆ ಸಂದರ್ಶನದಲ್ಲಿ ಕೇಳಲ್ಪಟ್ಟ ಆ ಸಿಂಪಲ್ ಪ್ರಶ್ನೆ ಯಾವುದು?

ಅಂದಹಾಗೆ ಸಂದರ್ಶನಕಾರರು ಅಭ್ಯರ್ಥಿಗೆ “ಬೆಂಗಳೂರಿನಲ್ಲಿ ವರ್ಷಕ್ಕೆ ಎಷ್ಟು ದಿನ ಛತ್ರಿ ಒಯ್ಯಬೇಕು?” ಎಂಬ ಒಂದು ಸರಳ ಪ್ರಶ್ನೆಯನ್ನು ಕೇಳಿದ್ದಾರೆ. ಆದರೆ ಈ ಅಭ್ಯರ್ಥಿಯು ಆ ಪ್ರಶ್ನೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾನೆ. ಅಭ್ಯರ್ಥಿಯು ನೋಟ್‌ಪ್ಯಾಡ್ ತೆಗೆದು ಮಳೆಯ ಪ್ರವೃತ್ತಿಗಳು, ಹಿಂದಿನ ವರ್ಷಗಳ ದತ್ತಾಂಶ, ಮಾನ್ಸೂನ್‌ನ ಸಮಯದ ಬಗ್ಗೆಲ್ಲಾ ವಿವರಿಸಿದ್ದಾನೆ.

ಆದರೆ ಸಂದರ್ಶನಕಾರರು “ಬೆಂಗಳೂರು ಕೇವಲ ಮಳೆಯ ಪ್ರಮಾಣವನ್ನು ಲೆಕ್ಕಹಾಕುವ ಸಾಮಾನ್ಯ ನಗರವಲ್ಲ” ಎಂದು ಹೇಳಿ ಅವನ ಉತ್ತರವನ್ನು ರಿಜೆಕ್ಟ್‌ ಮಾಡಿದ್ದಾರೆ. ಇಲ್ಲಿ ಮಳೆ ಎಷ್ಟು ಅನಿರೀಕ್ಷಿತವಾಗಿ ಬರುತ್ತದೆ ಎಂದರೆ ಜನರಿಗೆ ಛತ್ರಿ ಯಾವಾಗ ತೆಗೆದುಕೊಳ್ಳಬೇಕೆಂಬುದೇ ತಿಳಿಯುವುದಿಲ್ಲ. ಇಲ್ಲಿ ಜನರು ಬಿಸಿಲಿನಲ್ಲಿಯೂ ಸಹ ಛತ್ರಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ಏಕೆಂದರೆ ಇದ್ದಕ್ಕಿದ್ದಂತೆ ಮಳೆ ಬರಬಹುದು. ಅಭ್ಯರ್ಥಿಯ ಲೆಕ್ಕಾಚಾರಗಳು ಚೆನ್ನಾಗಿವೆ ಆದರೆ ಬೆಂಗಳೂರನ್ನು ಅರ್ಥಮಾಡಿಕೊಳ್ಳಲು ಅವನು ಪ್ರಯತ್ನಿಸಲಿಲ್ಲ ಎಂದಿದ್ದಾರೆ ಸಂದರ್ಶನಕಾರರು. ಬೆಂಗಳೂರು ವಿಶಿಷ್ಟ ಹವಾಮಾನ ಪರಿಸ್ಥಿತಿಗಳಿಂದ ತುಂಬಿರುವ ನಗರ. ಅದನ್ನು ಕೇವಲ ಅಂಕಿಅಂಶಗಳಿಗೆ ಸೀಮಿತಗೊಳಿಸುವುದು ತಪ್ಪು ಎಂದಿದ್ದಾರೆ.

ಐಪಿಎಸ್ ಅಧಿಕಾರಿ ಡಿ.ರೂಪಾ ಮೌಡ್ಗಿಲ್’ರಿಗೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕಿಯಾಗಿ (ADGP) ಬಡ್ತಿ

Comments are closed.