Chikkaballapura: ಕರುಳು ಹಿಂಡುವ ಘಟನೆ – ನಡು ರಸ್ತೆಯಲ್ಲೆ ಪ್ರಾಣಬಿಟ್ಟ ತುಂಬ ಗರ್ಭಿಣಿ

Chikkaballapura: ಮಾನಸಿಕ ಅಸ್ವಸ್ಥಳಾದ ತುಂಬ ಗರ್ಭಿಣಿಯೊಬ್ಬಳು ನಡು ರಸ್ತೆಯಲ್ಲಿಯೇ ಪ್ರಾಣ ಬಿಟ್ಟಂತಹ ಕರುಳು ಹಿಂಡುವ ಘಟನೆ ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ.

ಹೌದು, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ ರೈಲ್ವೆ ನಿಲ್ದಾಣದ ಬಳಿ ಮೇ 31, 2025ರಂದು ಜಂಗಮಕೋಟೆ ಮೂಲದ ಮಹಿಳೆ, ದಿಕ್ಕು ದೆಸೆಯಿಲ್ಲದೆ ಬೀದಿಗಳಲ್ಲಿ ಅಲೆದಾಡುತ್ತಿದ್ದ 30 ವರ್ಷದ ಮಾನಸಿಕ ಅಸ್ವಸ್ಥೆ, ತುಂಬು ಗರ್ಭಿಣಿ ರೇಣುಕಾ ಬೀದಿಯಲ್ಲಿ ಶವವಾಗಿ ಕಂಡುಬಂದಿದ್ದಾಳೆ. ಆಕೆಯನ್ನು ಯಾರೋ ದುಷ್ಕರ್ಮಿಗಳು ದೈಹಿಕವಾಗಿ ದುರ್ಬಳಕೆ ಮಾಡಿ ಗರ್ಭಿಣಿಯನ್ನಾಗಿ ಮಾಡಿದ್ದರು ಎಂಬ ಆರೋಪ ಉದ್ಭವಿಸಿದೆ.
8 ತಿಂಗಳ ಗರ್ಭಿಣಿಯಾಗಿದ್ದ ಆಕೆ, ರೈಲ್ವೆ ನಿಲ್ದಾಣದ ಬಳಿ ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿದ್ದಾಳೆ. ಈ ಘಟನೆಯು ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ದಿಕ್ಕಿಲ್ಲದವರಿಗೆ ಸೂಕ್ತ ರಕ್ಷಣೆಯ ಕೊರತೆಯನ್ನು ಎತ್ತಿ ತೋರಿಸಿದೆ. ರೇಣುಕಾಳ ದಾರುಣ ಅಂತ್ಯವು ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಈ ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪಿಎಸ್‌ಐ ವೇಣುಗೋಪಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
Comments are closed.