Belthangady: ಕಾಪಿನ ಬಾಗಿಲು ಅರಸಿನಮಕ್ಕಿ ರಸ್ತೆ ಮಧ್ಯೆ ಬೈಕಿಗೆ ಅಡ್ಡ ಬಂದ ಕಾಡೆಮ್ಮೆ: ಬೈಕ್ ಸವಾರರಿಬ್ಬರು ಗಂಭೀರ!

Belthangady: ಬೆಳ್ತಂಗಡಿ ತಾಲೂಕಿನ ಕಾಪಿನ ಬಾಗಿಲು ಅರಸಿನಮಕ್ಕಿ ರಸ್ತೆಯ ಹಂಸಗಿರಿ ಎಸ್ಟೇಟ್ ಬಳಿ ರಾತ್ರಿ ವೇಳೆ ಬೈಕ್ ಸವಾರಿಬ್ಬರು ತಮ್ಮ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ದಿಢೀರನೆ ಬೃಹತ್ ಗಾತ್ರದ ಕಾಡೆಮ್ಮೆ ಕಾಡಿನೊಳಗಿಂದ ಅಡ್ಡ ಬಂದ ಪರಿಣಾಮ ಬೈಕ್ ಸ್ಕಿಡ್ ಆಗಿ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಳೆದ ಮೇ 31ರಂದು ನಡೆದಿದೆ.

ಕಾಡೆಮ್ಮೆ ಅಡ್ಡ ಬಂದ ಪರಿಣಾಮ ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡ ಬೈಕ್ ಸವಾರಿಬ್ಬರು ಕಳೆಂಜ ಶಿಬರಾಜೆಯ ದಯಾನಂದ ಮತ್ತು ಚಿದಾನಂದ ಎಂಬವರಾಗಿದ್ದಾರೆ. ಗಂಭೀರ ಗಾಯಗೊಂಡಿದ್ದ ಇವರನ್ನು ಬಳಿಕ ಆಂಬುಲೆನ್ಸ್ ಮೂಲಕ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಯಿತು.
ಬೈಕ್ ಸವಾರಿಬ್ಬರೂ ಮೊನ್ನೆ ದಿನ ರಾತ್ರಿ ವೇಳೆ ಮನೆಯತ್ತ ತೆರಳುತ್ತಿದ್ದ ವೇಳೆ ಕಾಡಿನೊಳಗಿಂದ ಏಕಾಏಕಿ ಬೃಹತ್ ಗಾತ್ರದ ಕಾಡೆಮ್ಮೆ ಅಡ್ಡ ಬಂದು ಭಯಭೀತಿ ಹುಟ್ಟಿಸಿತ್ತೆ ನ್ನನಲಾಗಿದೆ. ಇದರಿಂದ ವಿಚಲಿತಗೊಂಡ ಬೈಕ್ ಸವಾರ ಕೂಡಲೇ ಬ್ರೇಕ್ ಹಾಕಿದ ಪರಿಣಾಮ ಬೈಕ್ ಸ ವಾರರಿಬ್ಬರೂ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ಆದರೆ ಎಷ್ಟೋ ಹೊತ್ತಿನ ಬಳಿಕ ರಸ್ತೆಯಲ್ಲಿ ಬಿದ್ದಿದ್ದ ಇವರನ್ನು ಗಮನಿಸಿದ ಸ್ಥಳೀಯರು ಆಂಬುಲೆನ್ಸ್ ಮೂಲಕ ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೆ೦ದು ತಿಳಿದುಬಂದಿದೆ.
Comments are closed.