Governor: ಲಿಫ್ಟ್ ನಲ್ಲಿ ಸಿಲುಕಿ ಪರದಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್!!

Governor: ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ಮೈಸೂರು ಮುಕ್ತ ವಿಶ್ವವಿದ್ಯಾಲಯದ ಲಿಫ್ಟಿನಲ್ಲಿ ಸಿಲುಕಿ ಹಾಕಿಕೊಂಡು ಕೆಲಕಾಲ ಪರದಾಡಿದಂತಹ ಘಟನೆ ನಡೆದಿದೆ.

ಹೌದು, ಕರ್ನಾಟಕ ಮುಕ್ತ ವಿವಿಯಲ್ಲಿನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗವರ್ನರ್ ಅವರು ಲಿಫ್ಟ್ನಲ್ಲಿ ತೆರಳುವಾಗ ಓವರ್ ಲೋಡ್ನಿಂದಾಗಿ ಲಿಫ್ಟ್ ಅರ್ಧಕ್ಕೆ ಸ್ಥಗಿತಗೊಂಡಿದೆ. ಲಿಫ್ಟ್ ಕೈಕೊಟ್ಟಿದ್ದರಿಂದ ರಾಜ್ಯಪಾಲರು ಮತ್ತವರೊಂದಿಗೆ ಇದ್ದ ಭದ್ರತಾ ಸಿಬ್ಬಂದಿ ಕೆಲಕಾಲ ಲಿಫ್ಟ್ನಲ್ಲೇ ಸಿಲುಕಿ ಸುಸ್ತಾದರು.
ಕೂಡಲೇ ಕೆಲ ಸಿಬ್ಬಂದಿಯನ್ನು ಕೆಳಗಿಳಿಸಿದ ಬಳಿಕ ಲಿಫ್ಟ್ ಮತ್ತೆ ಚಾಲನೆಗೊಂಡಿತು. ನಂತರ ಗವರ್ನರ್ ಅವರು ಲಿಫ್ಟ್ ಸಹವಾಸವೇ ಬೇಡವೆಂದು ನಡೆದುಕೊಂಡು ಸಾಗಿದರು ಎಂದು ತಿಳಿದುಬಂದಿದೆ.
Comments are closed.