FSSAI: ಆಹಾರ ಪ್ಯಾಕಿಂಗ್ ಮತ್ತು ಜಾಹೀರಾತುಗಳಲ್ಲಿ 100% ಬಳಸದಂತೆ FSSAI ಸೂಚನೆ!

FSSAI: ಆಹಾರ ಪದಾರ್ಥಗಳ ಪೊಟ್ಟಣಗಳ ಮೇಲೆ ಲೇಬಲ್ ಅಂಟಿಸುವಾಗ, ಪ್ಯಾಕಿಂಗ್ ಮತ್ತು ಜಾಹೀರಾತುಗಳಲ್ಲಿ “100%” ಎಂದು ಬಳಸದಂತೆ ಆಹಾರ ವ್ಯವಹಾರಗಳಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಸೂಚನೆ ನೀಡಿದೆ.

ಇಂತಹ ಪದ ಬಳಕೆಯು ಗ್ರಾಹಕರಲ್ಲಿ ಗೊಂದಲ ಮೂಡಿಸುವ ಜೊತೆಗೆ, ಆಹಾರ ಗುಣಮಟ್ಟ ನಿಯಂತ್ರಣಕ್ಕೆ ಸಂಬಂಧಿಸಿ ಜಾರಿಯಲ್ಲಿರುವ ಅವಕಾಶಗಳ ತಪ್ಪು ವ್ಯಾಖ್ಯಾನಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚು ಎಂದೂ ಹೇಳಿದೆ.
ಹಣ್ಣಿನ ರಸಗಳನ್ನು “100% ಹಣ್ಣಿನ ರಸ” ಎಂದು ವಿವರಿಸುವುದು ಕಾನೂನುಬದ್ಧವಾಗಿ ಅನುಮತಿಸಲಾಗುವುದಿಲ್ಲ ಮತ್ತು ದಾರಿತಪ್ಪಿಸುವ ಮಾರ್ಕೆಟಿಂಗ್ ವಿಧಾನವಾಗಿದೆ ಎಂದು ದೆಹಲಿ ಹೈಕೋರ್ಟ್ ಮುಂದೆ FSSAI ಈ ಹಿಂದೆ ನೀಡಿದ್ದ ನಿಲುವನ್ನು ಅನುಸರಿಸುತ್ತದೆ.
Comments are closed.