Sydney Sweeney: ಸ್ನಾನ ಮಾಡಿದ ನೀರನ್ನು ಸೋಪ್‌ ಮಾಡಿ ಮಾರಾಟಕ್ಕೆ ಇಟ್ಟ ಮಹಿಳೆ: ಆನ್‌ಲೈನ್‌ನಲ್ಲಿ ಬಾತ್‌ಸೋಪ್‌ ಲಭ್ಯ: 100 ಮಂದಿಗೆ ಫ್ರೀ ಸೋಪ್

Share the Article

Sydney Sweeney: ಹಾಲಿವುಡ್ ನ ಖ್ಯಾತ ನಟಿ ಸಿಡ್ನಿ ಸ್ವೀನಿ(27) ತನ್ನ ಸ್ನಾನದ ನೀರಿಂದ ತಯಾರಾಗಿರೋ ಸೋಪ್ ಒಂದನ್ನು ಪರಿಚಯಿಸುತ್ತಿದ್ದು, ಈ ವಿಷಯವನ್ನು ತಾನೇ ಸ್ವತಃ ಇನ್ಸ್ಟಗ್ರಾಮ್ ನಲ್ಲಿ ಹಂಚಿಕೊಂಡಿದ್ದಾಳೆ.

‘ಮೇಡಂ ವೆಬ್’ ಸೇರಿದಂತೆ ಹಲವು ಸಿನಿಮಾಗಳ ಖ್ಯಾತಿ ಹೊಂದಿರುವ ಸಿಡ್ನಿಯು ಬಾತ್‌ವಾಟರ್ ಬ್ಲಿಸ್ ಎಂಬ ಸೋಪ್‌ನ್ನು ಪರಿಚಯಿಸುತ್ತಿದ್ದು, ಇದು ಅವರ ಸ್ನಾನದ ನೀರಲ್ಲೇ ತಯಾರಾಗ್ತಿರೋದು ವಿಶೇಷವಾಗಿದೆ. ಹಾಗೂ ಆಕೆ ಡಾ. ಸ್ಕ್ವಾಚ್ ಎಂಬ ಸೋಪ್ ಕಂಪನಿಯೊಂದಿಗೆ ಈ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಈ ಸೋಪ್ ನ ಬೆಲೆ 8 ಡಾಲರ್ ಆಗಿದ್ದು, ಕೇವಲ 5,000 ಪೀಸ್‌ ಮಾತ್ರ ತಯಾರಾಗಲಿವೆ. ಹಾಗೂ ಜೂನ್ 4 ರಿಂದ ಆನ್‌ಲೈನ್‌ನಲ್ಲಿ ಸೋಪ್ ಲಭ್ಯವಿರುತ್ತದೆ. ಅಲ್ಲದೆ ಈ ಸೋಪ್ ಜೂನ್‌ 4 ರಂದು drsquatch.com ವೆಬ್‌ಸೈಟ್‌ನಲ್ಲಿ ನಲ್ಲಿ ಲಭ್ಯವಿರಲಿದೆ ಎಂದು ಆಕೆ ಬರೆದುಕೊಂಡಿದ್ದಾರೆ.

ಎಫ್ಫೋಲಿಯೇಟಿಂಗ್ ಸ್ಯಾಂಡ್, ಪೈನ್ ಮರದ ತೊಗಟೆಯ ಎಣ್ಣೆ ಮತ್ತು ಸಿಡ್ನಿ ಸ್ವೀನಿಯ ಸ್ನಾನದ ನೀರಿನಿಂದ ಈ ಸೋಪ್‌ ತಯಾರಾಗಲಿದ್ದು, ಕೇವಲ 5,000 ಸೋಪ್‌ ತಯಾರಿಸುವುದರಿಂದ, ಇವು ಅದೃಷ್ಟ ಇರುವ ಅಭಿಮಾನಿಗಳ ಪಾಲಿಗೆ ಮಾತ್ರ ಸಿಗಲಿವೆಯಂತೆ ಮತ್ತು ಇನ್ನೂ 100 ಜನ ಅದೃಷ್ಟ ಶಾಲಿಗಳಿಗೆ ಕಂಪನಿ ಉಚಿತವಾಗಿ ಒಂದೊಂದು ಸೋಪ್‌ ನೀಡಲಿದೆ ಎಂದು ವರದಿಯಾಗಿದೆ.

Comments are closed.