Kamal Haasan: ಕಮಲ್ ಹಾಸನ್ ಪರ ನಿಂತ ದಕ್ಷಿಣ ಭಾರತೀಯ ಕಲಾವಿದರ ಸಂಘ – ವಿವಾದದ ಬಗ್ಗೆ ಹೇಳಿದ್ದೇನು?

Share the Article

Kamal Haasan: ಸಿನಿಮಾ ಪ್ರಮೋಷನ್​ಗಾಗಿ ಬೆಂಗಳೂರಿಗೆ ಬಂದಿದಾಗ ಕಮಲ್ ಹಾಸನ್ ಅವರು ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಬೆನ್ನಲ್ಲೇ ಕರ್ನಾಟಕದಾದ್ಯಂತ ಕಮಲ್ ಹಾಸನ್ ಕ್ಷಮೆ ಕೇಳಬೇಕೆಂದು ಆಗ್ರಹಿಸಲಾಗಿತ್ತು. ಆದರೆ ಕಮಲ್ ಹಾಸನ್ ಮಾತ್ರ ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಉದ್ಧಟತನ ತೋರಿದ್ದಾರೆ. ಈ ಬೆನ್ನಲ್ಲೇ ಮತ್ತೆ ರಾಜ್ಯಾದ್ಯಂತ ಕಮಲ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು ಕರ್ನಾಟಕದಲ್ಲಿ ಅವರ ಚಿತ್ರಗಳನ್ನು ಬ್ಯಾನ್ ಮಾಡಲಾಗಿದೆ. ಇದರ ನಡುವೆಯೇ ದಕ್ಷಿಣ ಭಾರತೀಯ ಕಲಾವಿದರ ಸಂಘ ಕಮಲ್ ಹಾಸನ್ ಪರ ಧ್ವನಿ ಎತ್ತಿದೆ.

ಹೌದು, ಜೂನ್ 5 ರಂದು ಬಿಡುಗಡೆಯಾಗಲಿರುವ ಕಮಲ್ ಹಾಸನ್ ಅವರ ‘ಠಗ್ ಲೈಫ್’ ಚಿತ್ರಕ್ಕೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿದ್ದು ಚಿತ್ರವನ್ನು ಪ್ರದರ್ಶಿಸಲು ಬಿಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಘೋಷಿಸಿವೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತ ನಟರ ಸಂಘದ ಅಧ್ಯಕ್ಷ ನಾಸರ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

 ನಾಸರ್ ಹೇಳಿದ್ದೇನು?

ಕಮಲ್ ಮತ್ತು ಗಿರೀಶ್ ಕಾರ್ನಾಡ್ ನಡುವಿನ ಗೆಳೆತನ ಮತ್ತು ಬರವಣಿಗೆಯ ಮೇಲಿನ ಅವರ ಪ್ರೀತಿ ಎಲ್ಲರಿಗೂ ತಿಳಿದಿದೆ. ರಾಜ್‌ಕಮಲ್ ಫಿಲ್ಮ್ಸ್‌ನ ಮೊದಲ ಚಿತ್ರ ‘ರಾಜ ಪಾರ್ವೈ’ ಚಿತ್ರೀಕರಣಕ್ಕೆ ಚಾಲನೆ ನೀಡಿದವರು ಕನ್ನಡ ಚಿತ್ರರಂಗದ ದಿಗ್ಗಜ ಡಾ. ರಾಜ್‌ಕುಮಾರ್. ಡಾ. ರಾಜ್‌ಕುಮಾರ್ ಅವರನ್ನು ಅಣ್ಣನಂತೆ, ಶಿವರಾಜ್‌ಕುಮಾರ್ ಅವರನ್ನು ಮಗನಂತೆ ಮತ್ತು ಕನ್ನಡಿಗರನ್ನು ತನ್ನ ಕುಟುಂಬದವರಂತೆ ಕಮಲ್ ಹಾಸನ್ ನೋಡುತ್ತಾರೆ. ‘ಠಗ್ ಲೈಫ್’ ಸಂಗೀತ ಬಿಡುಗಡೆ ಸಮಾರಂಭದಲ್ಲಿ ಶಿವಣ್ಣ ಈ ವಿಷಯ ತಿಳಿಸಿದ್ದಾರೆ.

ಅಲ್ಲದೆ ರಾಜ್‌ಕುಮಾರ್ ಕುಟುಂಬದಲ್ಲಿ ತಮಿಳನಾದ ನಂತರ ಕನ್ನಡಿಗ ಶಿವಣ್ಣ ಬಂದರು ಎಂದು ಕಮಲ್ ಹೇಳಿದ್ದರು. ಕೆಲವರು ಇದನ್ನು ತಿರುಚಿ ಪ್ರಚಾರ ಮಾಡುತ್ತಿದ್ದಾರೆ. ಕನ್ನಡ ಭಾಷೆಯನ್ನು ಕಮಲ್ ಎಂದಿಗೂ ಕೀಳಾಗಿ ಕಂಡಿಲ್ಲ. ಕರ್ನಾಟಕಕ್ಕೆ ಕಮಲ್ ಹಾಸನ್ ಅವರು ನಾಲ್ಕು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕಮಲ್ ವಿರುದ್ಧದ ದುರುದ್ದೇಶಪೂರಿತ ಪ್ರಚಾರವನ್ನು ತಡೆಯಬೇಕು ಎಂದು ನಟರ ಸಂಘ ಕೋರಿದೆ ಎಂದು ಹೇಳಿದ್ದಾರೆ.

Comments are closed.