SEBI: ಹೂಡಿಕೆದಾರರಿಗೆ ದಿಕ್ಕುತಪ್ಪಿಸಿದ ಆರೋಪ: ನಟ ಆರ್ಷದ್ ವಾರ್ಸಿ ಸೇರಿದಂತೆ 59 ಮಂದಿಗೆ ಶೇರ್ ಮಾರ್ಕೆಟ್ ಇಂದ ನಿರ್ಬಂಧ

Share the Article

Delhi: ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ದಿಕ್ಕು ತಪ್ಪಿಸಿ ಮೋಸ ಮಾಡಿದ್ದಕ್ಕಾಗಿ ನಟ ಆರ್ಷದ್ ವಾರ್ಸಿ, ಅವರ ಪತ್ನಿ ಹಾಗೂ ಸಹೋದರ ಸೇರಿದಂತೆ 59 ಮಂದಿಯನ್ನು ಒಂದು ವರ್ಷಗಳ ಕಾಲ ಷೇರು ಮಾರುಕಟ್ಟೆ ಇಂದ ನಿರ್ಬಂಧಿಸಲಾಗಿದೆ.

ಇವರು ಸದ್ನಾ ಬ್ರಾಡ್ ಕಾಸ್ಟ್ ಲಿಮಿಟೆಡ್ ಎಂಬ ಕಂಪೆನಿಯ ಷೇರುಗಳನ್ನು ಕೃತಕವಾಗಿ ಹೆಚ್ಚು ಮಾಡಿ ಮಾರಾಟ ಮಾಡಿದ್ದಾರೆ ಎಂಬ ಆರೋಪವಿದ್ದು, ಇದೀಗ ಈ ಕಂಪೆನಿಯ ಹೆಸರನ್ನು ಕ್ರಿಸ್ಟಲ್ ಬ್ಯುಸಿನೆಸ್ ಸಿಸ್ಟಮ್ ಎಂದು ಬದಲಾಯಿಸಲಾಗಿದೆ. ಹೀಗಾಗಿ 7 ಜನರನ್ನು ಐದು ವರ್ಷ ಹಾಗೂ ಉಳಿದವರಮನು ಒಂದು ವರ್ಷ ನಿರ್ಬಂಧಿಸುವುದಾಗಿ SEBI ತಿಳಿಸಿದ್ದು, ತಲಾ 5 ಲಕ್ಷ ರೂ ದಂಡ ವಿಧಿಸಿದೆ.

ಮನೀಶ್ ಮಿಶ್ರ ಜೊತೆ ಸೇರಿ ವಾರ್ಸಿ ಈ ಕೃತ್ಯ ನಡೆಸಿದ್ದು, ಮನೀಶ್ ಕಂಪೆನಿಯ ಕುರಿತಾಗಿ ಒಳ್ಳೆ ಅಭಿಪ್ರಾಯವನ್ನು ಜನರಲ್ಲಿ ಮೂಡಿಸಲು ಕೆಲವೊಂದು ಯುಟ್ಯೂಬ್ ಚಾನೆಲ್ ಗಳನ್ನು ಬಳಸುತ್ತಿದ್ದ. ಈ ಇಬ್ಬರ ವಾಟ್ಸಾಪ್ ಚಾಟ್ ನಿಂದ ಮನೀಶ್ ವಾರ್ಸಿ ಹಾಗೂ ಅವರ ಪತ್ನಿ, ಅವರ ಸಹೋದರನ ಖಾತೆ ಗೆ 25 ಲಕ್ಷ ರೂ ವರ್ಗಾಯಿಸಲು ಪ್ರಸ್ತಾಪಿಸಿದ್ದ ಎಂಬುದು ತಿಳಿದುಬರುತ್ತದೆ. ಹಾಗೂ ಮನೀಶ್ ಕುರಿತಾಗಿ ವಾರ್ಸಿ ಗೆ ಮೊದಲೇ ತಿಳಿದಿದೆ ಎಂದು ಆತ ಒಪ್ಪಿಕೊಂಡಿದ್ದು, ಆತನ ಪತ್ನಿ ಹಾಗೂ ಅವರ ಸಹೋದರ ತಮಗೆ ಮೊದಲು ಈ ವಿಷಯ ತಿಳಿದಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

Comments are closed.