Uppinangady: ಉಪ್ಪಿನಂಗಡಿ: ತಡೆಗೋಡೆ ಬಿರುಕು: ಸ್ಥಳೀಯರಲ್ಲಿ ಭೀತಿ

Share the Article

Uppinangady: ಉಪ್ಪಿನಂಗಡಿಯಲ್ಲಿ ಹೆದ್ದಾರಿ ನಿರ್ಮಾಣಕ್ಕೆ ಅನುಕೂಲವಾಗುವಂತೆ ನಿರ್ಮಿಸಿದ ತಡೆಗೋಡೆಯೊಂದು ಬಿರುಕು ಬಿಟ್ಟಿದ್ದು ಸ್ಥಳೀಯರಲ್ಲಿ ಗೊಂದಲವುಂಟು ಮಾಡಿದೆ. 15 ಅಡಿಗೂ ಎತ್ತರವಿರುವ ಈ ಗೋಡೆಯನ್ನು ನಿರ್ಮಿಸುವ ಪ್ರಥಮ ಹಂತದಲ್ಲಿಯೇ ಇದರ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದು, ಎಲ್ಲವೂ ಸರಿಯಾಗಿಯೇ ಇದೆ ಎಂದು ಇಲಾಖೆಯವರು ತಿಳಿಸಿದ್ದರು.

ಇದೀಗ ಒಂದು ವರ್ಷದ ಒಳಗೆ ಈ ರೀತಿಯಾಗಿ ಬಿರುಕು ಬಿಟ್ಟಿದ್ದು, ಗೋಡೆಯು ಶಾಲೆಯ ಪಾರ್ಶ್ವದಲ್ಲಿರುವುದರಿಂದ ಮಗುಚಿ ಬಿದ್ದರೆ ಬಾರಿ ಅನಾಹುತ ಉಂಟಾಗುವ ಸಂಭವವಿದೆ. ಪುತ್ತೂರು ಶಾಸಕ ಅಶೋಕ್ ರೈ ಸೂಚನೆಯಂತೆ ಭೇಟಿ ನೀಡಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಭೇಟಿ ನೀಡುವಂತೆ ತಿಳಿಸಿದ್ದಾರೆ.

ಗೋಡೆಯನ್ನು ಪರಿಶೀಲಿಸಿದ ಗುತ್ತಿಗೆದಾರ ಸಂಸ್ಥೆಯ ಯೋಜನಾಧಿಕಾರಿ ಮಹೇಂದ್ರ ಕುಮಾರ್ ಸಿಂಗ್ ಮಾತನಾಡಿ ಮೇಲ್ನೋಟಕ್ಕೆ ಅಪಾಯವಲ್ಲದಿದ್ದರೂ ಇದರ ಅಳವಡಿಕೆಯ ಸಮಯದಲ್ಲಿ ಉಂಟಾದ ಕಾರ್ಯ ವ್ಯತ್ಯಯಗಳಿಂದ ಬಿರುಕು ಮೂಡಿರಬಹುದು ಇದರ ಅಮೂಲಾಗ್ರ ಪರಿಶೀಲನೆ ನಡೆಸುತ್ತೇವೆಂದು ಹೇಳಿದ್ದಾರೆ.

Comments are closed.