ಯುದ್ಧವಿಮಾನ, ಶಸ್ತ್ರಾಸ್ತ್ರ ಪೂರೈಕೆ ಆಗುತ್ತಿಲ್ಲ, ಕೇವಲ ಒಪ್ಪಂದಗಳಾಗುತ್ತಿವೆ: ಶಾಕಿಂಗ್ ಹೇಳಿಕೆ ಕೊಟ್ಟ ಏರ್ ಚೀಫ್ ಮಾರ್ಷಲ್

New delhi: ಯುದ್ಧವಿಮಾನ ಸೇರಿ ಸೇನೆಗೆ ಶಸ್ತ್ರಾಸ್ತ್ರಗಳ ಪೂರೈಕೆ ಆಗುತ್ತಿಲ್ಲ, ಕೇವಲ ಈ ಸಂಬಂಧ ಒಪ್ಪಂದಗಳಾಗುತ್ತಿವೆ. ಸಕಾಲಕ್ಕೆ ಅಸ್ತ್ರ ಶಸ್ತ್ರಗಳು ಪೂರೈಕೆಯಾಗುತ್ತಿಲ್ಲ ಎಂದು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ತಮ್ಮ.ಅಸಮಾಧಾನ ಹೊರ ಹಾಕಿದ್ದಾರೆ.

ದೆಹಲಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಕ್ಷಣಾ ಉತ್ಪಾದನಾ ಯೋಜನೆಗಳು ತುಂಬಾ ತಡವಾಗುತ್ತಿದೆ. ಭರವಸೆ ಕೊಟ್ಟ ಸಮಯದಲ್ಲಿ ಯಾವುದೂ ಪೂರೈಕೆಯಾಗುತ್ತಿಲ್ಲ. ನಮ್ಮಿಂದ ಸಾಧ್ಯವಿಲ್ಲವೆಂದು ತಿಳಿದಿದ್ದರೂ ಒಪ್ಪಂದಕ್ಕೆ ಸಹಿ ಹಾಕುವ ಬದಲು, ವಾಸ್ತವವಾದ ಹಾಗೂ ಪಾರದರ್ಶಕತೆಗೆ ಆದ್ಯತೆ ನೀಡುವ ಯೋಜನೆಯ ಜತೆ ಸಾಗಬೇಕಿತ್ತು ಎಂದು ಅವರು ಹೇಳಿದರು.
ಇನ್ನು, ಮುಂದಿನ 10 ವರ್ಷಗಳಲ್ಲಿ, ರಕ್ಷಣೋದ್ಯಮ ಮತ್ತು ಡಿಆರ್‌ಡಿಒದಿಂದ ನಿರೀಕ್ಷೆಗಳು ಹೆಚ್ಚಿವೆ. ಸೇನೆಗೆ ಅವಶ್ಯವಿರುವ ತಕ್ಷಣದ ಅಗತ್ಯತೆಗಳನ್ನು ಪೂರೈಸಲು “ಮೇಕ್ ಇನ್ ಇಂಡಿಯಾ’ ಜತೆ ತ್ವರಿತವಾಗಿ ರಕ್ಷಣೋದ್ಯಮ ಕಾರ್ಯನಿರ್ವಹಿಸಬೇಕು. ತೇಜಸ್ ಎಂಕೆ 1ಎ ಯುದ್ಧ ವಿಮಾನಕ್ಕೆ ಸೇನೆಯು 2021ರಲ್ಲಿ ಎಚ್‌ಎಎಲ್‌ಗೆ ಗುತ್ತಿಗೆ ನೀಡಿದೆ. ಜತೆಗೆ, 70 ಎಚ್‌ಐಟಿ-40 ತರಬೇತಿ ವಿಮಾನಕ್ಕೂ ಒಪ್ಪಂದ ಆಗಿದೆ. ಆದರೆ ಯಾವುದೇ ಉತ್ಪನ್ನಗಳು ಸಕಾಲಕ್ಕೆ ಸೇನೆಯ ಕೈ ಸೇರಿಲ್ಲ ಎಂದು ಹಿಂದೂಸ್ತಾನ್ ಆರೋಣಾತಿಕ್ಸ್ ಲಿಮಿಟೆಡ್ (ಎಚ್‌ಎಎಲ್) ವಿರುದ್ಧ ಪರೋಕ್ಷವಾಗಿ ತಮ್ಮ ಕೋಪ ಹೊರಹಾಕಿದ್ದಾರೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
Comments are closed.