Holiday: ಜೂನ್ 2 ಶಾಲಾ-ಕಾಲೇಜುಗಳಿಗೆ ರಜೆ?

Holiday : ಜೂನ್ 2 ರಂದು ಶಾಲಾ-ಕಾಲೇಜುಗಳಿಗೆ ರಜೆ ಸಿಗುವ ಸಾಧ್ಯತೆ ಇದೆ. ಯಾಕೆಂದರೆ ಕರ್ನಾಟಕ ಬಂದ್ ಆಗುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ. ಕಾರಣ ಖ್ಯಾತ ನಟ ಕಮಲ್ ಹಾಸನ್ ಕನ್ನಡದ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆ.

ಹೌದು, ಕನ್ನಡ ಭಾಷೆಗೆ ಭಾರಿ ದೊಡ್ಡ ಇತಿಹಾಸ ಇದ್ದರೂ ಕೂಡ, ಅದನ್ನು ತಿಳಿಯದೆ ತಮಿಳು ನಟ ಕಮಲ್ ಹಾಸನ್ ಮಾಡಿರುವ ಕಿರಿಕ್ ಇದೀಗ ಭಾರಿ ಬೆಂಕಿ ಹೊತ್ತಿಸಿದೆ. ಕನ್ನಡಿಗರು ಕರ್ನಾಟಕ ಬಂದ್ ಮಾಡಲು ಇದೀಗ ನಿರ್ಧಾರ ಮಾಡಿ, ಕನ್ನಡ ಪರ ಸಂಘಟನೆಗಳು ಬೃಹತ್ ಪ್ರತಿಭಟನೆಗೆ ಸಜ್ಜಾಗಿವೆ. ಹೀಗಿದ್ದಾಗಲೇ, ಜೂನ್ 2 ಸೋಮವಾರ ಶಾಲೆ & ಕಾಲೇಜುಗಳಿಗೆ ರಜೆ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ತಮಿಳು ನಟ ಕಮಲ್ ಹಾಸನ್ ಕನ್ನಡ ಭಾಷೆ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ ಎಂಬ ಸುದ್ದಿ ಹಬ್ಬಿದ ನಂತರ ಕನ್ನಡ ಪರ ಸಂಘಟನೆಗಳ ನಾಯಕರು ಇದೀಗ ಹೋರಾಟಕ್ಕೆ ಸಜ್ಜಾಗಿದ್ದಾರೆ. ಅದರಲ್ಲೂ, ಕರ್ನಾಟಕದ ಮೂಲೆ ಮೂಲೆಯಲ್ಲೂ ತಮಿಳು ನಟ ಕಮಲ್ ಹಾಸನ್ ವಿರುದ್ಧ ದೊಡ್ಡ ಮಟ್ಟದಲ್ಲಿಯೇ ಹೋರಾಟ ನಡೆಸಲು ಈಗ ತಯಾರಿ ಕೈಗೊಳ್ಳಲಾಗಿದೆ. ಒಂದು ವೇಳೆ ಇದು ದೊಡ್ಡ ಮಟ್ಟದಲ್ಲಿ ಯಶಸ್ವಿಯಾದರೆ ಅಂದು ಶಾಲಾ-ಕಾಲೇಜುಗಳಿಗೆ ರಜೆ ಸಿಗುವ ಸಾಧ್ಯತೆ ಇದೆ. ಆದರೆ ಇದು ಆಗುತ್ತದೆಯೋ ಇಲ್ಲವೋ ಎಂದು ಕಾದು ನೋಡಬೇಕಿದೆ.
Comments are closed.