Viral News: ‘ನಿನ್ನ ಪತ್ನಿ ಒಳ್ಳೆ ಫಿಗರ್’ ಅಂದ ಊರವರು, 2 ಅಂತಸ್ತಿನ ಮಹಡಿ ಏರಿ ಆತ್ಮಹತ್ಯೆಗೆ ಯತ್ನಿಸಿದ ಪತಿರಾಯ

Share the Article

Bareli: ಬರೇಲಿ: ಯುವಕನೊಬ್ಬ ತನ್ನ ಹೆಂಡತಿ ತುಂಬಾ ಸುಂದರವಾಗಿದ್ದಾಳೆ ಅಂತ ಆತ್ಮಹತ್ಯೆ ಮಾಡಿಕೊಳ್ಳಲು ಎರಡು ಅಂತಸ್ತಿನ ಮನೆಯ ಛಾವಣಿಯ ಮೇಲೆ ಹತ್ತಿದ ಘಟನೆ ನಡೆದಿದೆ. ಗುರುದೇವ್ ಎಂಬಾತನಿಗೆ ಗ್ರಾಮಸ್ಥರು ಮತ್ತು ಆತನ ಸಂಬಂಧಿಕರು ಅಪಹಾಸ್ಯ ಮಾಡಿದ ಕಾರಣ ಆತ ಆತ್ಮಹತ್ಯೆ ಮಾಡಿಕೊಳ್ಳಲು ಟೆರೇಸ್ ಏರಿದ್ದಾನೆ. ‘ಭಾರ್ಯಾ ರೂಪವತಿ ಶತ್ರು’ ಅನ್ನೋದು ಆತನ ಪಾಲಿಗೆ ನಿಜವಾದಂತಾಗಿದೆ.

ಗುರುದೇವ್’ಗೆ ಕೇವಲ ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಆದರೆ, ಮದುವೆಯನ್ನು ಸಂಭ್ರಮಿಸುವ ಬದಲು, ಅಪಹಾಸ್ಯವೇ ಹೆಚ್ಚಾಗಿದ್ದು. ನಿಜಕ್ಕೂ ಆತನ ಪತ್ನಿ ಮಾಡೆಲ್ ಥರ ಇದ್ದು ಆಕೆಯ ರೂಪ ನೋಡಿ ಊರವರು’ ನಿನ್ನ ಪತ್ನಿ ಒಳ್ಳೆ ಫಿಗರ್’ ‘, ನೋಡಪ್ಪಾ ನಿನ್ ಹೆಂಡ್ತಿ ನಿನ್ನ ಜತೆ ಬಾಳಲ್ಲ’ ಅನ್ನುವ ಮಾತಾಡುತ್ತಿದ್ದರು. ಅಂತಹ ಸುಂದರ ಮಹಿಳೆಯ ಜೊತೆ ಯಾವಾಗ ಮದುವೆ ಮುರಿದುಬೀಳುತ್ತೋ ಏನೋ ಎಂದು ಜನರು ಆತನನ್ನು ಅನುಮಾನಿಸಿ ಅವಮಾನಿಸತೊಡಗಿದರು. ಜನರ ಅಪಹಾಸ್ಯದಿಂದ ಮಾನಸಿಕವಾಗಿ ನೊಂದ ಗುರುದೇವ್, ಹತ್ತಿರದ ಕಟ್ಟಡದ ಟೆರೇಸ್ ಜಿಗಿಯುವುದಾಗಿ ಬೆದರಿಕೆ ಹಾಕಿದ್ದ.

ಗುರುದೇವ್‌ನ ಪತ್ನಿ ಎಷ್ಟು ಸುಂದರವಾಗಿದ್ದಳು ಎಂದರೆ, ಆಕೆ ‘ಮಾಡೆಲ್ ತರಹ ಇದ್ದಾಳೆ’ ಮತ್ತು ‘ಮಿಸ್ ಯೂನಿವರ್ಸ್ ರೀತಿ ಕಾಣುತ್ತಾಳೆ’ ಎಂದು ಜನರು ಹೇಳುತ್ತಿದ್ದರು. ಅಂತಹಾ ಮಾತು ಕೇಳಿ ಹಾಗೆ ಆತನಲ್ಲಿ ಕೀಳರಿಮೆ ಬೆಳೆಯುತ್ತಿತ್ತು. ಹಾಗೆ ಹೇಳಿದವರಲ್ಲಿ ಗುರುದೇವ್ ಜಗಳ ಮಾಡುತ್ತಿದ್ದ. ಹೆಂಡತಿಯ ಸೌಂದರ್ಯ ಊರವರಲ್ಲಿ ಅಸೂಯೆ ಮತ್ತು ಆತನಿಗೆ ಹುಚ್ಚು ಹಿಡಿಸಿತ್ತು.

ಹಾಗೆ ಕೋಪಗೊಂಡು ಆತ ಆತ್ಮಹತ್ಯೆ ಮಾಡಲು ಟೆರೇಸ್ ಹತ್ತಿ ಕುಳಿತಿದ್ದಾನೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸಿರೌಲಿ ಪೊಲೀಸ್ ಠಾಣೆಯ ಅಧಿಕಾರಿಗಳು ಆಗಮಿಸಿ ಪ್ರದೇಶವನ್ನು ಸುತ್ತುವರೆದರು. ಆತ ಬಿದ್ದರೂ ಏನೂ ಆಗಬಾರದು ಅಂತ ಟಾರ್ಪಾಲಿನ್, ಹಾಸಿಗೆಗಳು ಮತ್ತು ಬಲೆಗಳನ್ನು ಹಾಕಲಾಯಿತು. ಸುಮಾರು ಮೂರ್ನಾಲ್ಕು ಗಂಟೆಗಳ ಕಠಿಣ ಪರಿಶ್ರಮದ ನಂತರ, ಸಿರೌಲಿ ಪೊಲೀಸ್ ಠಾಣೆಯ ಸಿಬ್ಬಂದಿ ಮತ್ತು ಸಾರ್ವಜನಿಕರ ಸಹಾಯದಿಂದ ಗುರುದೇವ್‌ನನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು.

Comments are closed.