Chikkamagaluru: ಭಾರೀ ಗಾಳಿ ಮಳೆ: ಮುರಿದು ಬಿದ್ದ ಬೃಹತ್‌ ಮರ: ಕಾರು ಜಸ್ಟ್‌ ಪಾರು

Share the Article

Chikkamagaluru: ಚಾರ್ಮಾಡಿ ಘಾಟಿಯಲ್ಲಿರುವ ಅಣ್ಣಪ್ಪ ಸ್ವಾಮಿ ದೇಗುಲದ ಬಳಿ ಕಾರೊಂದು ಹೋಗುತ್ತಿದ್ದಂತೆ ಮರದ ಕೊಂಬೆ ಮುರಿದು ಬಿದ್ದಿರುವ ಘಟನೆ ನಡೆದಿದೆ. ಕಾರಿನಲ್ಲಿದ್ದ ಪ್ರವಾಸಿಗರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಪ್ರವಾಸಿಗರು ಧರ್ಮಸ್ಥಳದಿಂದ ಬರುತ್ತಿದ್ದು, ಈ ಸಮಯದಲ್ಲಿ ಭಾರೀ ಗಾಳಿ ಮಳೆ ಸುರಿಯುತ್ತಿತ್ತು. ಚಾರ್ಮಾಡಿ ಘಾಟಿಯ ಅಣ್ಣಪ್ಪ ದೇಗುಲದ ಬಳಿ ಕಾರು ಬರುತ್ತಿದ್ದಂತೆ ಮರ ಮುರಿದು ಬಿದ್ದಿದೆ. ಕಾರು ಜಸ್ಟ್‌ ಪಾಸಾಗಿದ್ದು, ಮರ ಏನಾದರೂ ಕಾರಿನ ಮೇಲೆ ಬಿದ್ದಿದ್ದರೆ ಅನಾಹುತ ನಡೆಯುತ್ತಿತು.

ಸ್ಥಳೀಯ ಯುವಕರು ಹಾಗೂ ಬಣಕಲ್‌ ಠಾಣೆ ಪೊಲೀಸರು ರಸ್ತೆಗೆ ಬಿದ್ದ ಮರವನ್ನು ತೆರವು ಗೊಳಿಸಿದ ಕೆಲಸ ಮಾಡಿದ್ದಾರೆ. ನಂತರ ವಾಹನ ಸಂಚಾರ ಸುಗಮವಾಗಿ ನಡೆದಿದೆ.

Comments are closed.