Home News Bantwal: ಬಂಟ್ವಾಳ: ಕೊಲೆಯತ್ನ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

Bantwal: ಬಂಟ್ವಾಳ: ಕೊಲೆಯತ್ನ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

Hindu neighbor gifts plot of land

Hindu neighbour gifts land to Muslim journalist

Bantwala: ಮೇ 16 ರಂದು ಶುಕ್ರವಾರ ರಾತ್ರಿ ಹಮೀದ್‌ ಎಂಬಾತನ ಮೇಲೆ ನಡೆದ ತಲವಾರಿ ದಾಳಿಯಲ್ಲಿ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಟ್ವಾಳ ನಗರ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧನ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರೋಪಿಗಳಾದ ಉಳ್ಳಂಜೆಯ ನೌಷದ್‌, ಕೈಕಂಬದ ನಿವಾಸಿ ನವಾಜ್‌ ಯಾನೆ ಬೀಡಿ ನವಾಜ್‌, ನೆಹರುನಗರದ ಮೇಹರೂಪ್‌, ನೆಹರುನಗರದ ರಿಝಾನ್‌ ಎಂಬುವವರನ್ನು ಬಂಧನ ಮಾಡಲಾಗಿದೆ.

ಹಮೀದ್‌, ತಸ್ಲಿಮ್‌ ಎಂಬುವವರ ಸ್ನೇಹಿತ. ತಸ್ಲಿಮ್‌ ಮತ್ತು ಹ್ಯಾರಿಶ್‌ ನಡುವೆ ಗಲಾಟೆ ನಡೆದಿತ್ತು. ಈ ವಿಷಯದಲ್ಲಿ ಹ್ಯಾರೀಶ್‌ ತಸ್ಲಿಮ್‌ನ ಮೇಲೆ ಚೂರಿ ದಾಳಿ ಮಾಡಿ, ಪರಾರಿಯಾಗಿದ್ದ. ಪೊಲೀಸರು ಹ್ಯಾರೀಶ್‌ನನ್ನು ಪತ್ತೆಹಚ್ಚುವ ಕೆಲಸ ನಡೆಸುತ್ತಿದ್ದಾರೆ. ಆದರೆ ಈತ ಇನ್ನೂ ಬಂಧನವಾಗಿಲ್ಲ. ಇದರ ನಡುವೆ ಹಮೀದ್‌ ತನ್ನ ಮೊಬೈಲ್‌ ಸ್ಟೇಟಸ್‌ನಲ್ಲಿ ಹ್ಯಾರೀಶ್‌ನ ಪತ್ತೆಗೆ 1 ಲಕ್ಷ ಬಹುಮಾನ ಎಂದು ಹಾಕಿದ್ದ. ಇದರಿಂದ ಕೋಪಗೊಂಡ ಹ್ಯಾರೀಶ್‌ ನೌಷದ್‌ ಎಂಬಾತನ ಜೊತೆ ಸೇರಿ ಹಮೀದ್‌ ಕೊಲೆಗೆ ಸುಪಾರಿ ನೀಡಿ ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದು, ಮುಖ್ಯ ಆರೋಪಿ ಹ್ಯಾರೀಶ್‌ ಬಂದನವಾಗಿಲ್ಲ. ಪೊಲೀಸರು ಆತನಿಗಾಗಿ ತನಿಖೆ ತೀವ್ರಗೊಳಿಸಿದ್ದಾರೆ.