Darshan Audio : ಕನ್ನಡದ ಕುರಿತು ಕಮಲ್ ಹಾಸನ್ ವಿವಾದ ವಿಚಾರ – ನಟ ದರ್ಶನ್ ಆಡಿಯೋ ಫುಲ್ ವೈರಲ್

Darshan Audio: ಕಮಲ್ ಹಾಸನ್ ಕನ್ನಡದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು, ಶಿವರಾಜ್ ಕುಮಾರ್ ಅವರು ‘ಇದು ಸಣ್ಣ ವಿಚಾರ, ಯಾಕೆ ಇದನ್ನು ಸುಮ್ಮನೆ ದೊಡ್ಡದು ಮಾಡುತ್ತೀರಿ’ ಎಂದು ಹೇಳಿಕೆ ನೀಡುವ ಮೂಲಕ ಮತ್ತೆ ಕನ್ನಡ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇದರ ಬೆನ್ನಲ್ಲೇ ಕನ್ನಡದ ಖ್ಯಾತ ನಟ ದರ್ಶನ್ ಅವರ ಆಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Thug Life: ಕಮಲ್ ಹಾಸನ್ ಸಿನಿಮಾ ‘ಥಗ್ ಲೈಫ್’ ಕರ್ನಾಟಕದಲ್ಲಿ ಬ್ಯಾನ್ ಆದ್ರೆ ಎಷ್ಟು ಕೋಟಿ ನಷ್ಟವಾಗಬಹುದು?
ದರ್ಶನ್ ಹೇಳಿದ್ದೇನು?
ನಟ ದರ್ಶನ್ ಅವರು ಇತ್ತೀಚೆಗೆ ಮಾಧ್ಯಮಗಳಿಂದ ದೂರವೇ ಇದ್ದಾರೆ. ಆದರೆ ಈಗ ಅವರು ಹಿಂದೊಮ್ಮೆ ಕನ್ನಡಾಭಿಮಾನದ ಬಗ್ಗೆ ಮಾತಾಡಿರೋ ವಿಡಿಯೊ ಸಾಕಷ್ಟು ವೈರಲ್ ಆಗುತ್ತಿದೆ. ಹಾಗಿದ್ದರೆ ದರ್ಶನ್ ಹೇಳಿದ್ದೇನು? – ́ನಮ್ಮವರು ಮೊದಲು ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ತಮಿಳು-ತೆಲುಗುದವರಿಗೆ ಇರೋವಷ್ಟು ಭಾಷಾಭಿಮಾನ ನಮ್ಮಲ್ಲಿ ಒಬ್ಬರಿಗೂ ಇಲ್ಲ. ಇದನ್ನ ನಾನು ಓಪನ್ ಆಗಿ ಹೇಳ್ತೇನೆ. ಯಾರಾದ್ರೂ ತಮಿಳವನು ಬಂದ್ರೆ ನಾವು ತಮಿಳಲ್ಲಿ ಮಾತಾಡ್ತೇವೆ..ತೆಲುಗುದವನು ಬಂದ್ರೆ ನಾವೇ ತೆಲುಗುದಲ್ಲಿ ಮಾತಾಡ್ತೇವೆ. ಅವರು ಯಾರೂ ಕನ್ನಡದಲ್ಲಿ ಮಾತಾಡೋದಿಲ್ಲʼ ಎಂದು ಹೇಳಿದ್ದರು. ಅದೇ ಮಾತು ಈಗ ಸಾಕಷ್ಟು ವೈರಲ್ ಆಗುತ್ತಿದೆ.
ಸ್ವರ್ಗದ ಹಾದಿಯಲ್ಲಿ ತೀರಿಕೊಂಡ ಪಾಂಡವರು, ಎಡೆಬಿಡದೆ ಹಿಂಬಾಲಿಸಿದ ಅವರ ನಾಯಿ ಸ್ವರ್ಗ ಸೇರಿತ್ತಾ?
Comments are closed.