Belthangady: ಮೂವರು ವಕೀಲರು, ಓರ್ವ ಇಂಜಿನಿಯರ್ ಕಚೇರಿಯ ಮುಂಬಾಗಿಲುಗಳಲ್ಲಿ ಕುಂಕುಮ ಚೆಲ್ಲಿ ವಾಮಾಚಾರ!?

Share the Article

Belthangady: ಬೆಳ್ತಂಗಡಿಯ ಮಿನಿ ವಿಧಾನಸೌಧದ ಬಳಿ ಐಬಿ ರಸ್ತೆ ಪಕ್ಕದಲ್ಲೇ ಇರುವ ಖಾಸಗಿ ವಾಣಿಜ್ಯ ಸಂಕೀರ್ಣದಲ್ಲಿರುವ ಮೂರು ಮಂದಿ ವಕೀಲರ ಕಚೇರಿ ಸೇರಿದಂತೆ ಓರ್ವ ಇಂಜಿನಿಯರ್ ಕಚೇರಿಗಳ ಮುಂಭಾಗಿಲಿಗೆ ಕುಂಕುಮ ಚೆಲ್ಲಿ ವಾಮಾಚಾರ ನಡೆಸಿರುವುದು ಇಂದು ಮುಂಜಾನೆ ಬೆಳಕಿಗೆ ಬಂದಿದೆ.

ಬೆಳ್ತಂಗಡಿಯ ಮಿನಿ ವಿಧಾನಸೌಧದ ಬಳಿ ಐಬಿ ರಸ್ತೆಗೆ ತಾಗಿಕೊಂಡೇ ಇರುವ ವಿಜ್ಞೇಶ್ ಸಿಟಿ ವಾಣಿಜ್ಯ ಸಂಕೀರ್ಣದ ಒಂದನೇ ಮಹಡಿಯಲ್ಲಿರುವ ವಕೀಲರಾದ ಸಂತೋಷ್ ಕುಮಾರ್, ಗಂಗಾಧರ ಪೂಜಾರಿ ಹಾಗೂ ಮಹಿಳಾ ಒಕ್ಕೂಟದ ಕಚೇರಿ ಬಳಿ ಇರುವ ವಕೀಲರಾದ ಮನೋಹರ್ ಇಳಂತಿಲರ ಕಚೇರಿ ಸೇರಿದಂತೆ ಸಿದ್ಧಿವಿನಾಯಕ ಅಸೋಸಿಯೇಟ್ಸ್ ಇಂಜಿನಿಯರ್ ಕಚೇರಿಯ ಮುಂಬಾಗಿಲಿನಲ್ಲಿ ಈ ರೀತಿ ಕುಂಕುಮ ಚೆಲ್ಲಿ ವಾಮಾಚಾರ ನಡೆಸಿರುವುದು ಇಂದು ಮುಂಜಾನೆ ಕಂಡು ಬಂದಿದೆ.

ಆದರೆ ಈ ಸಂಕೀರ್ಣದಲ್ಲಿ ಹಲವು ಕಚೇರಿಗಳು, ಸೈಬರ್ ಸೆಂಟರ್ ಗಳು, ಫೋಟೋ ಸ್ಟುಡಿಯೋ ಹಾಗೂ ಇನ್ನಿತ್ತ್ಯಾದಿ ಕಚೇರಿಗಳಿದ್ದು ಪ್ರತಿಯೊಂದು ಕಚೇರಿ ಮುಂಭಾಗದಲ್ಲೂ ಸಿಸಿ ಕ್ಯಾಮರಾಗಳಿದ್ದರೂ ಸಹಿತ ನಿರ್ದಿಷ್ಟವಾಗಿ ಕೇವಲ ನಾಲ್ಕು ಮಂದಿಯ ಕಚೇರಿ ಮುಂಭಾಗಿಲುಗಳಿಗಷ್ಟೇ ಈ ರೀತಿ ಕುಂಕುಮ ಚೆಲ್ಲಿ ವಾಮಾಚಾರ ನಡೆಸಿರುವುದು ಭಾರಿ ಕುತೂಹಲ ಮತ್ತು ಆಶ್ಚರ್ಯಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Comments are closed.