Shivrajkumar : ‘ಶಿವಣ್ಣನಂತಹ ನಟ ಸಿಕ್ಕಿರುವುದು ನಮ್ಮ ಕರ್ಮ’ – ಕಮಲ್ ಹಾಸನ್ ಗೆ ಮತ್ತೆ ಜೈ ಎಂದ ಶಿವರಾಜ್ ಕುಮಾರ್ ವಿರುದ್ಧ ಕನ್ನಡಿಗರ ಆಕ್ರೋಶ

Shivrajkumar : ಕಮಲ್ ಹಾಸನ್ ಕನ್ನಡದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು, ಶಿವರಾಜ್ ಕುಮಾರ್ ಅವರು ‘ಇದು ಸಣ್ಣ ವಿಚಾರ, ಯಾಕೆ ಇದನ್ನು ಸುಮ್ಮನೆ ದೊಡ್ಡದು ಮಾಡುತ್ತೀರಿ’ ಎಂದು ಹೇಳಿಕೆ ನೀಡುವ ಮೂಲಕ ಮತ್ತೆ ಕನ್ನಡ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಅಲ್ಲದೆ ಇದೇ ವೇದಿಕೆಯಲ್ಲಿ ಶಿವರಾಜ್ ಕುಮಾರ್ ಕೂಡ ಇದ್ದು, ಕಮಲ್ ಹಾಸನ್ ಹೇಳಿಕೆಗೆ ಅವರು ಹೌದು ಎಂದು ಶಿವರಾಜ್ ಕುಮಾರ್ ವಿರುದ್ಧ ಕೂಡ ಕನ್ನಡಿಗರು ಕಿಡಿಕಾರಿದ್ದರು. ಇದೀಗ ಮತ್ತೊಮ್ಮೆ ಕನ್ನಡಿಗರು ಶಿವಣ್ಣನಂತ ನಟ ನಮಗೆ ಸಿಕ್ಕಿರುವುದು ನಮ್ಮ ಕರ್ಮ ಎಂದು ಮತ್ತೆ ಕಿಡಿ ಕಾರಿದ್ದಾರೆ.

ಕಮಲಹಾಸನ್ ಅಂದರೆ ನನಗೆ ತುಂಬಾ ಇಷ್ಟ ಅವರು, ”ಕನ್ನಡ ಭಾಷೆ ತಮಿಳಿನಿಂದ ಹುಟ್ಟಿತು” ಎಂದು ಹೇಳಿರುವುದು ದೊಡ್ಡ ವಿಷಯವೇ ಅಲ್ಲ, ಯಾಕೆ ಅದನ್ನು ದೊಡ್ಡ ವಿಚಾರ ಮಾಡ್ತೀರಾ? :- ಶಿವ (ರಾಜಕುಮಾರ್?)
ಇಂತಹ ನಿರಭಿಮಾನಿ, ಸ್ವಾರ್ಥಿ ಸಿಕ್ಕಿರೋದು ನಮ್ಮ ಕರ್ಮ. ಇನ್ನೆಲ್ಲಿ ಕನ್ನಡ, ಕನ್ನಡ ಚಿತ್ರರಂಗ ಉದ್ಧಾರ ಆಗುತ್ತೇ..!@NimmaShivanna pic.twitter.com/GbZZj02USM— ಗುರುದೇವ್ ನಾರಾಯಣ್ ❤️ GURUDEV NARAYAN (@Gurudevnk16) May 28, 2025
ಹೌದು, ಸಿನಿಮಾ ಪ್ರಮೋಷನ್ಗಾಗಿ ಬೆಂಗಳೂರಿಗೆ ಬಂದಿದಾಗ ಕಮಲ್ ಹಾಸನ್ ಅವರು ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಬೆನ್ನಲ್ಲೇ ಕರ್ನಾಟಕದಾದ್ಯಂತ ಕಮಲ್ ಹಾಸನ್ ಕ್ಷಮೆ ಕೇಳಬೇಕೆಂದು ಆಗ್ರಹಿಸಲಾಗಿತ್ತು. ಆದರೆ ಕಮಲ್ ಹಾಸನ್ ಮಾತ್ರ ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಉದ್ಧಟತನ ತೋರಿದ್ದಾರೆ. ಈ ಬೆನ್ನಲ್ಲೇ ಶಿವರಾಜ್ ಕುಮಾರ್ ಅವರು ಖಾಸಗಿ ಕಾರ್ಯಕ್ರಮ ಒಂದರಲ್ಲಿ ಮಾತನಾಡಿ “ಕಮಲ್ ಹಾಸನ್ ಅವರು ಕನ್ನಡವನ್ನು ತುಂಬಾ ಪ್ರೀತಿ ಮಾಡುತ್ತಾರೆ. ನಮ್ಮ ತಂದೆಯವರ ಬಗ್ಗೆ ಅಷ್ಟೇ ಗೌರವ ಕೊಡುತ್ತಾರೆ. ನಿನ್ನೆ ಬಂದಾಗಲೂ ಅಷ್ಟೇ ಚೆನ್ನಾಗಿ ಕನ್ನಡ ಮಾತನಾಡಿದ್ದಾರೆ. ಬೆಂಗಳೂರು ಬಗ್ಗೆಯೂ ಗೌರವದಿಂದ ಮಾತನಾಡಿದ್ದಾರೆ. ನಾವು ಅವರನ್ನು ನೋಡಿ ಬೆಳೆದವರು. ನಾನು ಕೂಡ ಅವರ ಬಹುದೊಡ್ಡ ಅಭಿಮಾನಿ. ನನಗೆ ಅವರೇ ಸ್ಫೂರ್ತಿ. ನನ್ನ ನೆಚ್ಚಿನ ನಟ ಕೂಡ ಅವರೇ. ಪ್ರಸ್ತುತ ಬೆಳವಣಿಗೆ ಖಂಡಿತ ಅವರಿಗೆ ಅರ್ಥವಾಗಿರುತ್ತದೆ. ಅವರು ಏನು ಮಾಡಬೇಕು ಅದನ್ನು ಖಂಡಿತ ಮಾಡೇ ಮಾಡುತ್ತಾರೆ ಅನ್ನೋ ನಂಬಿಕೆ ನನಗಿದೆ. ಇದು ಸಣ್ಣ ವಿಚಾರ ಇದನ್ನು ಯಾಕೆ ದೊಡ್ಡದು ಮಾಡುತ್ತೀರಿ ಇಲ್ಲಿಗೆ ನಿಲ್ಲಿಸಿ ಎಂದು ತೇಪೆ ಹಚ್ಚಿರುವ ಮಾತನಾಡಿದ್ದಾರೆ.
ಈ ಪ್ರತಿಕ್ರಿಯೆಗೆ ಇದೀಗ ಕನ್ನಡಿಗರು ಮತ್ತೊಮ್ಮೆ ಶಿವರಾಜ್‌ಕುಮಾರ್ ವಿರುದ್ಧ ಆಕ್ರೋಶ ಹೊರಹಾಕಿದ್ದು, ನಿಮ್ಮಂತಹ ನಟನನ್ನು ಪಡೆದದ್ದು ನಮ್ಮ ಕರ್ಮ, ನಿಮ್ಮಿಂದ ಕನ್ನಡ ಚಿತ್ರರಂಗ ಉದ್ಧಾರ ಆದ ಹಾಗೆ ಎಂದು ಕಿಡಿಕಾರಿದ್ದಾರೆ. ಇದಷ್ಟೇ ಅಲ್ಲದೇ
Comments are closed.