HC:ವಾಟ್ಸಪ್ ಚಾಟ್‌ಗಳು ಇನ್ನು ಸಾಕ್ಷಿಗಳಾಗುವುದಿಲ್ಲ – ಹೈಕೋರ್ಟ್ ಮಹತ್ವದ ತೀರ್ಪು

HC: ವಾಟ್ಸಾಪ್ ಚಾಟ್‌ಗಳು ಸಾಕ್ಷಿಗಳಾಗಿರಲು ಸಾಧ್ಯವಿಲ್ಲ ಎಂದು ದೆಹಲಿ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದ್ದು, ಅಂತಹ ಚಾಟ್‌ಗಳನ್ನು ‘ಸಂಬಂಧಿತ ಪುರಾವೆ’ಗಳಾಗಿ ಬಳಸಬಹುದು ಎಂದು ಹೇಳಿದೆ.

2020 ರ ಈಶಾನ್ಯ ದೆಹಲಿ ಗಲಭೆಯ ಸಂದರ್ಭದಲ್ಲಿ ದಾಖಲಾಗಿದ್ದ ಐದು ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯ, ಈ ಸಂದರ್ಭದಲ್ಲಿ ಈ ತೀರ್ಪು ನೀಡಿದೆ. ಈ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾಟ್ಸಾಪ್ ಗ್ರೂಪ್ಗಳಲ್ಲಿ ಚರ್ಚಿಸಲಾಗಿತ್ತು. ಕೊಲೆ ಮಾಡಿದ ವಿಚಾರವನ್ನು ಹಂಚಿಕೊಳ್ಳಲಾಗಿತ್ತು. ತನಿಖೆ ವೇಳೆ ಈ ಗ್ರೂಪ್ ಬೆನ್ನು ಬಿದ್ದ ಪೊಲೀಸರು, ವಾಟ್ಸಾಪ್ ಚಾಟ್‌ಗಳನ್ನು ಇಟ್ಟುಕೊಂಡು ತನಿಖೆ ನಡೆಸಿದ್ದರು.
ಆದರೆ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲ ಅವರು, “ಗುಂಪಿನ ಇತರ ಸದಸ್ಯರ ದೃಷ್ಟಿಯಲ್ಲಿ ಹೀರೋ ಆಗುವ ಉದ್ದೇಶದಿಂದ ಮಾತ್ರ ಅಂತಹ ಪೋಸ್ಟ್‌ಗಳನ್ನು ಮಾಡಬಹುದು. ಇದು ಯಾವುದೇ ಸತ್ಯವಿಲ್ಲದೆ ಬಡಾಯಿ ಕೊಚ್ಚಿಕೊಳ್ಳುವಂತೆಯೇ ಇರಬಹುದು. ಆದ್ದರಿಂದ, ಆರೋಪಿಗಳು … ವಾಸ್ತವವಾಗಿ ಇಬ್ಬರು ಮುಸ್ಲಿಂ ಪುರುಷರನ್ನು ಕೊಂದಿದ್ದಾರೆ ಎಂದು ಚಾಟ್‌ಗಳನ್ನು ಅವಲಂಬಿಸಿ ಸಾಬೀತುಪಡಿಸಲು ಸಾಧ್ಯವಿಲ್ಲ. ಈ ಚಾಟ್‌ಗಳನ್ನು ಗರಿಷ್ಠ ಪುರಾವೆಯಾಗಿ ಬಳಸಬಹುದು ಎಂದು ಹೇಳಿದ್ದಾರೆ.
Comments are closed.