ಅಬ್ದುಲ್ ರಹಿಮಾನ್ ಹತ್ಯೆ ಸುಭಾಷ್ ಶೆಟ್ಟಿ ಕೊಲೆ ಪ್ರತೀಕಾರವಲ್ಲ, ಮಸೀದಿ ಬಳಿ ನಡೆದಿದ್ದ ಹಳೆಯ ಹಲ್ಲೆ ಕಾರಣ?!

Share the Article

Bantwal: ಬಂಟ್ವಾಳದ ಕೊಳ್ತ ಮಜಲು, ಇರಾಕೋಡಿಯಲ್ಲಿ ಹಾಡ ಹಗಲೇ ಪಿಕಪ್ ಚಾಲಕ ಅಬ್ದುಲ್ ರಹಿಮಾನ್ ನನ್ನು ತಲವಾರನಿಂದ ಬರ್ಬರವಾಗಿ ಕಡಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ ಎನ್ನಲಾಗಿದ್ದು ಇದು ಸುಹಾನ್ ಶೆಟ್ಟಿ ಕೊಲೆಗೆ ನಡೆದ ಪ್ರತೀಕಾರವಲ್ಲ ಬದಲಾಗಿ ಸ್ಥಳೀಯ ಯುವಕರ ಮೇಲಿನ ಹಲ್ಲೆಯ ದ್ವೇಷದಿಂದಲೇ ನಡೆದುದಾಗಿದೆ ಎಂಬ ಮಾಹಿತಿಗಳು ಇದೀಗ ಬಹಿರಂಗಗೊಂಡಿವೆ ಎನ್ನಲಾಗುತ್ತಿದೆ.

Cancer: ವೀರ್ಯ ತಂದಿಟ್ಟ ಆಪತ್ತು – ಬರೋಬ್ಬರಿ 67 ಮಕ್ಕಳಿಗೆ ಕ್ಯಾನ್ಸರ್ !!

ಇದರ ಜೊತೆಯಲ್ಲೇ ಈ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಲೆ ನಡೆಸಿದ ಪ್ರಮುಖ ಆರೋಪಿಗಳ ಪೈಕಿ ಮೂವರನ್ನು ಬಂಧಿಸಲಾಗಿದೆ ಎನ್ನುವ ಮಾಹಿತಿಯೂ ಕೂಡಾ ಲಭ್ಯವಾಗಿದೆ ಎನ್ನಲಾಗುತ್ತಿದೆ.

ಕೊಲೆಯಾದ ಅಬ್ದುಲ್ ರಹಿಮಾನ್ ಅಮಾಯಕನೆಂದು ಬಿಂಬಿಸಲಾಗುತ್ತಿದೆಯಾದರೂ ಆತ ಅಮಾಯಕನಾಗಿರದೆ ಎಸ್‌ಡಿಪಿಐ ಸಂಘಟನೆಯ ಸಕ್ರಿಯ ಕಾರ್ಯಕರ್ತನೆಂದು ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ. ಅಲ್ಲದೆ ಈತನ ನೇತೃತ್ವದ ತಂಡ ಕಳೆದ ಎರಡು ತಿಂಗಳ ಹಿಂದೆ ಕೊಳ್ತಮಜಲು ಮಸೀದಿ ಬಳಿ ಹಿಂದೂ ಯುವಕರ ತಂಡವನ್ನು ಅಡ್ಡಗಟ್ಟಿ ವಿನಾಕಾರಣ ಸಾಮೂಹಿಕ ಹಲ್ಲೆ ನಡೆಸಿತ್ತು ಎನ್ನಲಾಗುತ್ತಿದೆ. ಇದರ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದೇ ಕಾರಣಕ್ಕಾಗಿಯೇ ಹಿಂದೆ ಹಲ್ಲೆಗೊಳಗಾಗಿದ್ದ ತಂಡವೇ ಕಳೆದ ಮಂಗಳವಾರ ಬರ್ಬರವಾಗಿ ಕೊಲೆಗೈದು ತನ್ನ ಸೇಡನ್ನು ತೀರಿಸಿಕೊಂಡಿದೆ ಎನ್ನುವ ಮಾಹಿತಿಗಳು ಇದೀಗ ಲಭ್ಯವಾಗಿದೆ ಎನ್ನಲಾಗುತ್ತಿದೆ.

EX MP: ಭಾರತದಲ್ಲಿ ಐಸ್ ಕ್ರೀಮ್ ಮಾರುತಿದ್ದಾರೆ ಪಾಕಿಸ್ತಾನದ ಮಾಜಿ ಸಂಸದ !! ಕಾರಣ ನಿಜಕ್ಕೂ ಅಚ್ಚರಿ

ಆದರೆ ಈ ಕೊಲೆ ಸುಹಾಸ್ ಶೆಟ್ಟಿ ಕೊಲೆಯ ರಿವೇoಜ್ ಮರ್ಡರ್ ಎಂದೇ ಬಹುತೇಕರು ತಿಳಿದುಕೊಂಡಿದ್ದಾರಲ್ಲದೆ, ಎಲ್ಲಾ ಕಡೆಯೂ ಹಾಗೆಂದೇ ವ್ಯಾಖ್ಯಾನಿಸಲಾಗುತ್ತಿದೆ. ಆದರೆ ಇದೀಗ ಸ್ಥಳೀಯವಾಗಿ ಲಭ್ಯವಾಗುತ್ತಿರುವ ಮಾಹಿತಿಯನ್ವಯ ಇದು ಸುಹಾಸ್ ಶೆಟ್ಟಿ ಕೊಲೆಯ ಪ್ರತಿಕಾರವಲ್ಲ, ಅದರ ಬದಲಾಗಿ ಕಳೆದೆರಡು ತಿಂಗಳ ಹಿಂದೆ ನಡೆದ ಹಲ್ಲೆಗೆ ಪ್ರತೀಕವಾಗಿ ನಡೆಸಿದ ಕೃತ್ಯವಾಗಿದೆ ಎನ್ನುವ ಮಾಹಿತಿಗಳು ಇದೀಗ ಬಹಿರಂಗಗೊಳ್ಳತೊಡಗಿದೆ ಎನ್ನಲಾಗುತ್ತಿದೆ. ಈ ಪ್ರಕರಣ ಸಂಬಂಧ ಕೃತ್ಯ ನಡೆಸಿದ ಆರೋಪಿಗಳ ಪೈಕಿ ಮೂವರನ್ನು ಬಂಧಿಸಲಾಗಿದೆ ಎಂಬ ಮಾಹಿತಿಗಳು ಕೂಡ ಲಭ್ಯವಾಗುತ್ತಿದೆ ಎನ್ನಲಾಗಿದೆ. ಈ ಸುದ್ದಿಗಳ ಸಂಪೂರ್ಣ ಸತ್ಯಾಸತ್ಯತೆ ತನಿಖೆಯಿಂದ ಹೊರ ಬರಬೇಕಿದೆ.

Jan Aushadhi Kendra : ‘ಜನೌಷಧಿ ಕೇಂದ್ರ’ ತೆರವಿಗೆ ‘ಕಾಂಗ್ರೆಸ್ ಶಾಸಕ’ರಿಂದಲೇ ವಿರೋಧ !! ಸರ್ಕಾರಕ್ಕೆ ಭಾರೀ ಮುಖಭಂಗ

Comments are closed.