NPCI: ಆ.1 ರಿಂದ UPI ಬಳಕೆಗೆ ಹೊಸ ರೂಲ್ಸ್‌: ಬ್ಯಾಲೆನ್ಸ್‌ ಚೆಕ್‌ ಮಾಡುವ ರೀತಿ ಹೇಗೆ?

Share the Article

ಇದೇ ಆಗಸ್ಟ್ 1 ರಿಂದ UPI ಬಳಕೆದಾರರು ಬ್ಯಾಲೆನ್ಸ್ ಪರಿಶೀಲನೆ, ವಹಿವಾಟಿನ ಸ್ಥಿತಿ ಪರಿಶೀಲನೆ ಮತ್ತು ಖಾತೆ ಪಟ್ಟಿ ಪ್ರವೇಶದ ಮೇಲೆ ಹೊಸ ನಿರ್ಬಂಧಗಳು ಎದುರಾಗಳಿದ್ದು, NPCI ಈ ಬದಲಾವಣೆಗಳನ್ನು ವ್ಯವಸ್ಥೆಯ ಸುರಕ್ಷತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಜಾರಿಗೊಳಿಸುತ್ತಿದೆ. NCPI ಎಲ್ಲಾ ಬ್ಯಾಂಕ್‌ಗಳು ಮತ್ತು ಪಾವತಿ ಅಪ್ಲಿಕೇಶನ್‌ಗಳಿಗೆ ಹೊಸ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್‌ಗಳ (API) ಬಳಕೆಯ ನಿಯಮಗಳನ್ನು ಹೊರತರುತ್ತದೆ.

ಇನ್ಮೇಲೆ ಪ್ರತಿ UPI ಅಪ್ಲಿಕೇಶನ್‌ನಲ್ಲಿ ನೀವು ದಿನಕ್ಕೆ 50 ಬಾರಿ ಮಾತ್ರ ನಿಮ್ಮ ಖಾತೆಯ ಬ್ಯಾಲೆನ್ಸ್ ನೋಡಲು ಸಾಧ್ಯವಾಗುತ್ತದೆ ಹಾಗೂ ನೀವು 2 ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದರೆ, ನೀವು ಪ್ರತಿಯೊಂದರಲ್ಲೂ 50 ಬಾರಿ ಬ್ಯಾಲೆನ್ಸ್ ಚೆಕ್‌ ಮಾಡಬಹುದು. ಅದರ ಹೊರತಾಗಿ, ಅಪ್ಲಿಕೇಶನ್ ನಿಮ್ಮ ಬ್ಯಾಲೆನ್ಸ್ ಮಾಹಿತಿಯನ್ನು ನೀಡುವುದಿಲ್ಲ. ಹಾಗೂ ನೆಟ್‌ವರ್ಕ್ ಸಮಸ್ಯೆ ಅಥವಾ ತಾಂತ್ರಿಕ ದೋಷದಿಂದಾಗಿ ಪಾವತಿ ವಿಫಲವಾದಲ್ಲಿ, ನೀವು ಅಪ್ಲಿಕೇಶನ್ ಬಳಸಿ ಸ್ಥಿತಿಯನ್ನು ಪದೇ ಪದೇ ಪರಿಶೀಲಿಸಲು ಸಾಧ್ಯವಾಗುವುದಿಲ್ಲ. ಸಿಸ್ಟಮ್ ಲೋಡ್ ಅನ್ನು ಕಡಿಮೆ ಮಾಡಲು NPCI ಪುನರಾವರ್ತಿತ ಸ್ಟೇಟಸ್‌ ಚೆಕ್‌ಅನ್ನು ನಿರ್ಬಂಧ ಮಾಡಲಿದೆ.

ನಿಮ್ಮ ಮೊಬೈಲ್ ನಂಬರ್ ಗೆ ಯಾವ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಲಾಗಿದೆ ಎಂದು ಪರಿಶೀಲಿಸುವುದಾದರೆ ಪ್ರತಿ ಅಪ್ಲಿಕೇಶನ್‌ಗೆ ದಿನಕ್ಕೆ 25 ಬಾರಿ ಮಾತ್ರ ಇದನ್ನು ಮಾಡಬಹುದಾಗಿದ್ದು, ನೀವು ನಿಮ್ಮ ಬ್ಯಾಂಕ್ ಅನ್ನು ಆಯ್ಕೆ ಮಾಡಿ ಒಪ್ಪಿಗೆ ನೀಡಿದರೆ ಮಾತ್ರ ವಿನಂತಿಯು ಕಾರ್ಯನಿರ್ವಹಿಸುತ್ತದೆ. ಜೊತೆಗೆ ಈ ನಿಯಮಗಳನ್ನು ಉಲ್ಲಂಘಿಸುವವರು ದಂಡ, ಬಳಕೆಯ ನಿರ್ಬಂಧಗಳು ಅಥವಾ ಹೊಸ ಬಳಕೆದಾರರನ್ನು ಸೇರಿಸಿಕೊಳ್ಳುವುದನ್ನು ನಿಷೇಧಿಸಬಹುದಾಗಿದ್ದು, ಎಲ್ಲಾ PSPಗಳು ಆಗಸ್ಟ್ 31, 2025 ರೊಳಗೆ ಸಿಸ್ಟಮ್ ಆಡಿಟ್ ಅಂಡರ್ಟೇಕಿಂಗ್ ಅನ್ನು ಸಹ ಸಲ್ಲಿಸಬೇಕು. ಹಾಗೂ ಈ ಮಿತಿಗಳು ಸಿಸ್ಟಮ್ ಸ್ಥಿರತೆ ಮತ್ತು ಸುರಕ್ಷತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು NPCI ಹೇಳಿದೆ.

Comments are closed.