Shridhar Naik: ಶ್ರೀಧರ್ ನಾಯಕ್ಗೆ ಏಡ್ಸ್ ಬಂದಿತ್ತು-ಪತ್ನಿ ಜ್ಯೋತಿ

Actor Shridhar Nayak: ಕಿರುತೆರೆ ನಟ ಶ್ರೀಧರ್ ನಾಯಕ್ ಅವರ ಸಾವು ಎಲ್ಲರಲ್ಲೂ ಅಪಾರ ದುಃಖ ಉಂಟು ಮಾಡಿದ್ದು, ಕಿರುತೆರೆಯಲ್ಲಿ ಸೂತಕದ ಛಾಯೆ ಉಂಟಾಗಿದೆ.ಅವರ ಕುಟುಂಬದಲ್ಲಿ ಸಾಕಷ್ಟು ಒಡಕು ಇತ್ತು. ಶ್ರೀಧರ್ ಪತ್ನಿಯದ್ದು ಎನ್ನಲಾದ ಹಳೆಯ ಆಡಿಯೋ ಒಂದು ಈಗ ವೈರಲ್ ಆಗಿದ್ದು, ಅದರಲ್ಲಿ ಶ್ರೀಧರ್ ಗೆ ಏಡ್ಸ್ ಇತ್ತು ಎಂಬುದು ತಿಳಿದುಬಂದಿದೆ.

ಈ ಮೊದಲು ಶ್ರೀಧರ್ ಪತ್ನಿ ವಿರುದ್ಧ ಆರೋಪ ಮಾಡಿದಾಗ, ಇದಕ್ಕೆ ಪ್ರತಿಯಾಗಿ ಜ್ಯೋತಿ ಈ ಆಡಿಯೋ ಹರಿಬಿಟ್ಟಿದ್ದರು ಎನ್ನಲಾಗಿದೆ. ತಾನು ಸಿಂಗರ್ ಆಗಬೇಕೆಂದು ಬಂದವಳು, ನಮ್ಮಿಬ್ಬರ ನಡುವೆ ಪ್ರೀತಿ ಉಂಟಾಗಿ ಈತ ಜಾತಕ ಕೊಡದ ಕಾರಣ ಮನೆಯಲ್ಲಿ ಮದುವೆಗೆ ಒಪ್ಪಲಿಲ್ಲ ಆದರೂ ನಾವು ಮದುವೆ ಆಗಿದ್ದೇವೆ ಎಂದು ಮಾತು ಶುರು ಮಾಡಿದ ಆಕೆ, ಆತ ಮದುವೆಯ ನಂತರ ಪ್ರೀತಿಸಿಲ್ಲ, ರೀಸ್ಟ್ರಿಕ್ಷನ್ಸ್ ಹಾಕಲು ಶುರು ಮಾಡಿದ ಹಾಗೂ ಹಲವಾರು ನನ್ನನ್ನು ಹೊಡೆದಿದ್ದಾನೆ ಇದನ್ನು ತಾನು ಯಾರ ಬಳಿಯೂ ಹೇಳಿಕೊಂಡಿಲ್ಲ ಎಂದಿದ್ದಾರೆ.
ತಾನು ಯಾರ ಜೊತೆಯೂ ಓಡಿ ಹೋಗಿಲ್ಲ ತಾನು ಹಾಗೂ ಮಗ ಇಬ್ಬರೇ ಜೀವನ ಮಾಡುತ್ತಿದ್ದೇವೆ. ನಾನು ಅವರ ಕ್ಯಾರೆಕ್ಟರ್ ಮೇಲೆ ಎಂದಿಗೂ ಅನುಮಾನ ಪಟ್ಟಿಲ್ಲ ಆದರೂ ಅವನಿಗೆ ಎಚ್ಐವಿ ಬಂದಿದೆ ಹಾಗೂ ಕ್ಯಾನ್ಸರ್ ಕೂಡ ಬಂದಿದೆ’ ಎಂಬ ಮಾತನ್ನು ಅವರು ಆಡಿಯೋದಲ್ಲಿ ಹೇಳಿದ್ದಾರೆ. ಹಲವಾರು ಬಾರಿ ತಾನು ವೈದ್ಯರ ಬಳಿ ಔಷಧಿಗಳ ಬಗ್ಗೆ ಕೇಳಿದ್ದೇನೆ, ಆತನಿಗೆ ಸಿಕ್ಕಾಪಟ್ಟೆ ಅಹಂಕಾರ ಇತ್ತು, ದೇವರು ಕೊಟ್ಟ ಎಲ್ಲವನ್ನೂ ಕಳೆದುಕೊಂಡ. ಇದಕ್ಕೆಲ್ಲ ಅವನೇ ಕಾರಣ ಹಾಗೂ ನನ್ನ ಕಾರಣಕ್ಕೆ ಏಡ್ಸ್ ಬಂದಿಲ್ಲ ಎಂದಿದ್ದರು ಶ್ರೀಧರ್ ಎಂದು ಹೇಳಿದ್ದಾರೆ.
Comments are closed.