Gujarath : ಗುಜರಾತ್ ನಲ್ಲಿ ಮೋದಿ ರೋಡ್ ಶೋ – ಹೂ ಸುರಿಯಲು ಕರ್ನಲ್ ಸೋಫಿಯಾ ಕುಟುಂಬದವರಿಗೆ ಫೋನ್ ಮಾಡಿ ಕರೆಸಿದ ಜಿಲ್ಲಾಧಿಕಾರಿ : ಇದೆಂಥಾ ಶೋಕಿ?

Gujarath : ಪಾಕಿಸ್ತಾನದ ವಿರುದ್ದ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದು ಭಾರತೀಯ ಸೇನಾ ಪಡೆಯ ಕರ್ನಲ್ ಸೋಫಿಯಾ ಖುರೇಷಿ ಅವರು. ಇದೀಗ ಈ ಖುರೇಷಿ ಕುಟುಂಬದ ಸದಸ್ಯರು ಗುಜರಾತ್‌ನ ವಡೋದರಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮೋದಿ ಅವರ ಮೇಲೆ ಹೂವಿನ ಸುರಿಮಳೆಗೈದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಆಕ್ರೋಶ ವ್ಯಕ್ತವಾಗಿದೆ.

This should shame every Indian
Colonel Sofia Qureshi’s family was asked by the local collector office to join Modi’s roadshow & shower flowers on him
Insane narcissism, imagine using a War Hero’s family for cheap PR pic.twitter.com/656w6586uX
— Ankit Mayank (@mr_mayank) May 26, 2025
ಹೌದು, ಗುಜರಾತ್ ನ ರೋಡ್‌ಶೋನಲ್ಲಿ ಆಪರೇಷನ್ ಸಿಂದೂರ್‌ನ ಪ್ರಮುಖ ಸದಸ್ಯೆ ಕರ್ನಲ್ ಸೋಫಿಯಾ ಖುರೇಷಿ ಅವರ ಕುಟುಂಬ ಸದಸ್ಯರೂ ಸಹ ಪಾಲ್ಗೊಂಡಿದ್ದರು. ಸೋಫಿಯಾ ಖುರೇಷಿ ಅವರ ಅವಳಿ ಸಹೋದರಿ ಶೈನಾ ಸುನ್ಸಾರಾ ಸಹ ಈ ರೋಡ್‌ಶೋನಲ್ಲಿ ಭಾಗವಹಿಸಿ ಮೇಲೆ ಹೂ ಮಳೆ ಸುರಿಸಿದ್ದಾರೆ. ಇದೀಗ ಮೋದಿ ರೋಡ್ ಶೋಗೆ ಹೂ ಮಳೆ ಸುರಿಸಲು ಸೋಫಿಯಾ ಖುರೇಶಿ ಅವರ ಕುಟುಂಬದವರನ್ನು ಬಳಸಿಕೊಳ್ಳಲಾಗಿದೆ. ಇದು ಎಂಥ ಶೋಕಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಫೋಟೊವನ್ನು ನರೇಂದ್ರ ಮೋದಿ ಸಹ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಸೋಫಿಯಾ ಕುಟುಂಬ ನಿರೀಕ್ಷೆಯಂತೆ ಸಂತಸವಾಗಿದೆ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ನಡೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಇದಕ್ಕೆ ಕಾರಣ ಸೋಫಿಯಾ ಕುಟುಂಬದವರನ್ನು ಸ್ಥಳೀಯ ಜಿಲ್ಲಾಧಿಕಾರಿ ಕರೆ ಮಾಡಿ ಸೋಫಿಯಾ ಕುಟುಂಬವನ್ನು ಸಂಪರ್ಕಿಸಿ ಆಹ್ವಾನಿಸಿ ಕರೆಸಲಾಗಿದೆ ಎಂಬುದು.
ಯಸ್, ಇಂಡಿಯಾ ಟುಡೇ ಜೊತೆ ಮಾತನಾಡುವಾಗ ಈ ವಿಷಯದ ಬಗ್ಗೆ ಪ್ರಶ್ನೆ ಎದುರಾದಾಗ ಕಲೆಕ್ಟರ್ ಕರೆ ಮಾಡಿ ಬರಲು ಹೇಳಿದರು ಎಂದು ಶೈನಾ ಸುನ್ಸಾರಾ ತಿಳಿಸಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ದೇಶಕ್ಕಾಗಿ ಹೋರಾಡುವ ಸೈನಿಕರ ಕುಟುಂಬದ ಸದಸ್ಯರನ್ನು ತನ್ನ ಮೇಲೆ ಹೂ ಸುರಿಯಲು ಕರೆಸಿಕೊಳ್ಳುವುದು ಎಂಥ ಶೋಕಿ ಎಂದು ಕಿಡಿಕಾರಿದ್ದಾರೆ. ಇಂಥ ಕೆಲಸ ಮಾಡಿದ ಕಲೆಕ್ಟರ್‌ಗೆ ನಾಚಿಕೆಯಾಗಬೇಕು ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ.
Comments are closed.