

Hariyana: ಹರಿಯಾಣದ ಪಂಚಕುಲದಲ್ಲಿ ಒಂದೇ ಕುಟುಂಬದ 7 ಮಂದಿ ಕಾರಿನೊಳಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರೆಲ್ಲರೂ ಡೆಹ್ರಾಡೂನ್ ನಿವಾಸಿಗಳೆಂದು ತಿಳಿದು ಬಂದಿದೆ.
ಒಂದೇ ಕುಟುಂಬದ ಏಳು ಮಂದಿ ಕಾರಿನೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ಧಾವಿಸಿದಿ ಪೊಲೀಸರು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಏಳು ಜನರನ್ನು ಕೂಡಲೇ ಸೆಕ್ಟರ್ 26 ರಲ್ಲಿರುವ ಓಜಾಸ್ ಆಸ್ಪತ್ರೆಗೆ ದಾಖಲು ಮಾಡಿದ್ದು, ವೈದ್ಯರು ತಪಾಸಣೆ ಮಾಡಿದಾಗ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಪ್ರವೀಣ್ ಮಿತ್ತಲ್, ಅವರ ತಂದೆ ದೇಶರಾಜ್ ಮಿತ್ತಲ್, ತಾಯಿ ಮತ್ತು ಪತ್ನಿ, ಮೂವರು ಮಕ್ಕಳು ಮೃತರು. ಇವರೆಲ್ಲರೂ ಮೂಲತಃ ಉತ್ತರಾಖಂಡದವರಾಗಿದ್ದು, ಪಂಚಕುಲದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಮೃತರ ಆಪ್ತರು ನೀಡಿದ ಮಾಹಿತಿಯ ಪ್ರಕಾರ, ಟ್ರಾವೆಲಿಂಗ್ ಏಜೆನ್ಸಿ ನಡೆಸುತ್ತಿದ್ದ ಕುಟುಂಬವು ತಮ್ಮ ವ್ಯವಹಾರದಲ್ಲಿ ಭಾರೀ ನಷ್ಟವನ್ನು ಅನುಭವಿಸಿದ್ದರು. ನಂತರ ಸಾಲದ ಸುಳಿಯಲ್ಲಿ ಸಿಲುಕಿದ್ದರು ಎಂದು ಹೇಳಿದ್ದಾರೆ. ಸ್ಥಳದಲ್ಲಿ ಆತ್ಮಹತ್ಯೆ ಪತ್ರ ದೊರಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಶವಗಳನ್ನು ಪಂಚಕುಲದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದ್ದು, ಪರೀಕ್ಷೆಯ ವರದಿ ನಂತರ ನಿಖರ ಮಾಹಿತಿ ದೊರಕಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.













