Dharmendra: ‘ಕಡೂರು’ ಹೆಸರು ಹೇಗೆ ಬಂತು? ಸುಳ್ಳು ಹೇಳಿ ಸ್ಥಳೀಯರ ಕೈಗೆ ಸಿಕ್ಕಿ ಹಾಕಿಕೊಂಡ ಖ್ಯಾತ ವ್ಲಾಗರ್ ಧರ್ಮೇಂದ್ರ !!

Share the Article

Dharmendra: ಮೈಸೂರಿನ ಧರ್ಮೇಂದ್ರ ಅವರ ಕುರಿತು ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಚೆನ್ನಾಗಿ ಗೊತ್ತು. ಹಲವು ಇತಿಹಾಸ ಪ್ರಸಿದ್ಧ ಕ್ಷೇತ್ರಗಳಿಗೆ ತೆರಳಿ ಅಲ್ಲಿನ ಮಹತ್ವಗಳನ್ನು ಸಾರುತ್ತ, ಅವುಗಳ ಹಿನ್ನೆಲೆಯನ್ನು ತಿಳಿಸುತ್ತಾ, ಮರೆತು ಹೋದವುಗಳನ್ನು ನೆನಪಿಸುತ್ತ ಅರಿವು ಮೂಡಿಸುವ ಕಾರ್ಯದಲ್ಲಿ ಮಗನರಾಗಿದ್ದಾರೆ. ‘ನಮಸ್ಕಾರ ಸ್ನೇಹಿತರೆ’ ಎಂದು ಮಾತು ಆರಂಭಿಸುವ ಧರ್ಮೇಂದ್ರ ಅವರ ಮಾತುಗಳನ್ನು, ಅವರ ಜ್ಞಾನದ ನುಡಿಗಳನ್ನು ಕೇಳುವುದೇ ಒಂದು ಚೆಂದ. ಧರ್ಮೇಂದ್ರ ಅವರು ಕೆಲವು ಊರುಗಳ ಹೆಸರುಗಳು, ತಿಂಡಿಗಳ ಹೆಸರು ಯಾಕೆ ಬಂದವು ಎಂದು ತಿಳಿಸುವ ಪ್ರಯತ್ನವನ್ನು ಕೂಡ ಇತ್ತೀಚೆಗೆ ಮಾಡುತ್ತಿದ್ದಾರೆ. ಅಂತೆಯೇ ಇದೀಗ ಧರ್ಮೇಂದ್ರ ಅವರು ಕಡೂರು ಹೆಸರು ಹೇಗೆ ಬಂತು ಎಂದು ಹೇಳಿ, ವಿಡಿಯೋ ಮಾಡಿ ಸ್ಥಳೀಯರ ಕೈಗೆ ತಗಲಾಕಿಕೊಂಡಿದ್ದಾರೆ.

ಹೌದು, ಧರ್ಮೇಂದ್ರ ಕುಮಾರ್‌ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಬಗ್ಗೆ ವಿಡಿಯೊವೊಂದನ್ನು ಮಾಡಿದ್ದು, ಕಡವೆಗಳು ಹೆಚ್ಚಿದ್ದ ಕಾರಣ ಈ ಜಾಗಕ್ಕೆ ಕಡೂರು ಎಂದು ಹೆಸರು ಬಂತು ಎಂದು ವಿಡಿಯೊದಲ್ಲಿ ತಿಳಿಸಿದ್ದಾರೆ. ಆದರೆ ಕೆಲ ಸ್ಥಳೀಯರು ಈ ಮಾಹಿತಿ ತಪ್ಪು ಎಂದಿದ್ದಾರೆ. ಸ್ಥಳೀಯ ವ್ಯಕ್ತಿಯೋರ್ವ ಧರ್ಮೇಂದ್ರ ಕುಮಾರ್‌ ತಮ್ಮ ಹಳೆಯ ವಿಡಿಯೊಗಳಂತೆ ಈ ವಿಡಿಯೊವೂ ಸಹ ತಪ್ಪು ಮಾಹಿತಿಯಿಂದ ಕೂಡಿದೆ ಎಂದಿದ್ದಾರೆ.

ಇತ್ತ ಸ್ಥಳೀಯರು ಸಹ ವಿಡಿಯೊವೊಂದನ್ನು ಚಿತ್ರೀಕರಿಸಿದ್ದು, ಕಡವೆಗಳು ಹೆಚ್ಚಿದ್ದ ಕಾರಣಕ್ಕೆ ಕಡೂರು ಎಂಬದು ಸುಳ್ಳು. ಅಸಲಿಯತ್ತಿಗೆ ಈ ಪಟ್ಟಣಕ್ಕೆ ಈ ಹಿಂದೆ ಬರಬೇಕೆಂದರೆ ಊರಾಚೆ ಇರುವ ಎರಡು ಹೊಳೆಗಳನ್ನು ದಾಟಿಕೊಂಡು ಬರಬೇಕಿತ್ತು. ಹೀಗೆ ಹೊಳೆ ದಾಟುವುದಕ್ಕೆ ಕಡವು ಎಂದು ಕರೆಯಲಾಗುತ್ತಿತ್ತು. ಹೀಗಾಗಿ ಕಡೂರು ಎಂದು ಹೆಸರು ಬಂದಿದೆ ಎಂದು ಇವರು ವಾದಿಸಿದ್ದಾರೆ. ಅವರು ಪ್ರತಿಯೊಂದು ಸ್ಥಳಗಳಿಗೂ ತೆರಳಿ, ದಾಖಲೆಯಾಗಿ ಶಾಸನಗಳನ್ನು, ನದಿಗಳನ್ನು ಕೂಡ ತೋರಿಸಿದ್ದಾರೆ.

Comments are closed.