Actor Shridhar Nayak: ಕಿರುತೆರೆ ನಟ ಶ್ರೀಧರ್‌ ನಾಯಕ್‌ ನಿಧನ

Share the Article

Actor Shridhar Nayak: ಪಾರು ಸೀರಿಯಲ್‌ ಖ್ಯಾತಿಯ ಕಿರುತೆರೆ ನಟ ಶ್ರೀಧರ್‌ ನಾಯಕ್‌ (47) ನಿಧನ ಹೊಂದಿದ್ದಾರೆ. ನಟ ಶ್ರೀಧರ್‌ ನಾಯಕ್‌ ಅವರು ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತ ಹೊಂದಿದ್ದಾರೆ.

ಹೆಬ್ಬಾಳದಲ್ಲಿರುವ ಬ್ಯಾಪಿಸ್ಟ್‌ ಆಸ್ಪತ್ರೆಯಲ್ಲಿ ಅವರ ಪಾರ್ಥೀವ ಶರೀರವನ್ನು ಇಡಲಾಗಿದೆ. ಬೆಳಿಗ್ಗೆ 11 ಗಂಟೆಯವರೆಗೆ ಅಂತಿಮ ದರ್ಶನದ ವ್ಯವಸ್ಥೆಯನ್ನು ಮಾಡಲಾಗಿದೆ.

ಪಾರು ಸೀರಿಯಲ್‌, ಮ್ಯಾಕ್ಸ್‌ ಸಿನಿಮಾದಲ್ಲಿ ನಟನೆ ಮಾಡಿದ್ದ ಶ್ರೀಧರ್‌ ನಾಯಕ್‌ ಅವರ ಆರೋಗ್ಯ ಇತ್ತೀಚೆಗೆ ಹದಗೆಟ್ಟಿದ್ದು, ಆರ್ಥಿಕ ಪರಿಸ್ಥಿತಿ ಕೂಡಾ ಚೆನ್ನಾಗಿರಲಿಲ್ಲ. ಈ ಕಾರಣದಿಂದ ಅವರ ಸಹಾಯಕ್ಕಾಗಿ ನೆರವನ್ನು ಕೂಡಾ ಕೋರಿದ್ದು, ಹಲವು ಕಲಾವಿದರು ಆರ್ಥಿಕ ಸಹಾಯವನ್ನು ಮಾಡಿದ್ದರು.

Comments are closed.