Mysore Pak ಹೆಸರು ಬದಲಾವಣೆ ವಿಚಾರ – ‘ಮೈಸೂರು ಪಾಕ್’ ಕಂಡುಹಿಡಿದ ವಂಶಸ್ಥರಿಂದ ಬಾರಿ ವಿರೋಧ!!

Mysore Pak: ಪಾಕಿಸ್ತಾನದ ವಿರುದ್ಧ ದೇಶದ ಜನರ ಕೋಪ ಕಡಿಮೆಯಾಗುತ್ತಿಲ್ಲ. ಇದರ ಪರಿಣಾಮ ರಾಜಸ್ಥಾನದ ಜೈಪುರದಲ್ಲಿ ‘ಪಾಕ್’ ಎಂಬ ಹೆಸರುಳ್ಳ ಕರ್ನಾಟಕದ ಪ್ರಸಿದ್ಧ ಸಿಹಿತಿನಿಸು ‘ಮೈಸೂರು ಪಾಕ್’ ಸೇರಿ ಹಲವು ಸಿಹಿ ಖಾದ್ಯಗಳ ಹೆಸರನ್ನೇ ಬದಲಿಸಲಾಗಿತ್ತು. ಇದೀಗ ಮೈಸೂರು ಪಾಕ್ ಕಂಡುಹಿಡಿದ ವಂಶಸ್ಥರಿಂದ ಈ ಹೆಸರು ಬದಲಾವಣೆಗೆ ಭಾರಿ ವಿರೋಧ ವ್ಯಕ್ತವಾಗಿದೆ.

ಹೌದು, ರೈತರು ಪಾಕಿಸ್ತಾನಕ್ಕೆ ರಫ್ತಾಗುತ್ತಿದ್ದ ಆಹಾರ ಪದಾರ್ಥಗಳನ್ನು ಸ್ಥಗಿತಗೊಳಿಸಿದರೆ, ವ್ಯಾಪಾರಸ್ಥರು ವ್ಯಾಪಾರ ಸಂಬಂಧವನ್ನೇ ಕಡಿತಗೊಳಿಸಿದ್ದಾರೆ. ಇದೀಗ ರಾಜಸ್ಥಾನದ ಸ್ವೀಟ್ ಶಾಪ್ ವಿನೂತನ ರೀತಿಯಲ್ಲಿ ‘ಪಾಕ್’ ವಿರುದ್ಧ ಆಕ್ರೋಶ ಹೊರಹಾಕಿದ್ದು ಜೈಪುರದ ಅಂಗಡಿ ಮಾಲೀಕರು ‘ಪಾಕ್’ ಹೆಸರಿರುವ ತಿನಿಸುಗಳ ಹೆಸರನ್ನೇ ಬದಲಾಯಿಸಿದ್ದಾರೆ. ಅದರಲ್ಲೂ ಕರ್ನಾಟಕದ ಮೈಸೂರಿನ ಪ್ರಸಿದ್ಧ ‘ಮೈಸೂರು ಪಾಕ್’ ಹೆಸರನ್ನೂ ಕೂಡ ಬದಲಾಯಿಸಲಾಗಿದ್ದು, ಮೈಸೂರು ಪಾಕ್ (Mysore Pak) ಅನ್ನು ‘ಮೈಸೂರು ಶ್ರೀ’ಯಾಗಿ (Mysore Shree) ಕರೆಯಲಾಗಿತ್ತು. ಮೈಸೂರು ಪಾಕ್ ಹೆಸರು ಬದಲಾಯಿಸಿದ್ದಕ್ಕೆ ಇದನ್ನು ಕಂಡು ಹಿಡಿದಿದ್ದ ಕಾಕಾಸುರ ಮಾದಪ್ಪ ಅವರ ಮರಿಮೊಮ್ಮಗ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತಾಗಿ ಮಾತನಾಡಿದ ಕಾಕಾಸುರ ಮಾದಪ್ಪ ಅವರ ಮರಿಮೊಮ್ಮಗ ಎಸ್ ನಟರಾಜ್, ಇದನ್ನು ಮೈಸೂರು ಪಾಕ್ ಎಂದು ಕರೆಯಿರಿ, ಅದರ ಹೊರತು ಬೇರೆ ಯಾವುದೇ ಹೆಸರಿರಲು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೆ ಪ್ರತಿಯೊಂದು ಇತಿಹಾಸ ಅಥವಾ ಸಾಂಪ್ರದಾಯಿಕ ವಸ್ತುಗಳು ಸರಿಯಾದ ಹೆಸರನ್ನು ಹೊಂದಿರುವಂತೆಯೇ, ಮೈಸೂರು ಪಾಕ್ ಕೂಡ ತನ್ನದೇ ಆದ ಹೆಸರನ್ನು ಹೊಂದಿದೆ. ಅದನ್ನು ಬದಲಾಯಿಸಬಾರದು ಅಥವಾ ತಪ್ಪಾಗಿ ಪ್ರತಿನಿಧಿಸಬಾರದು ಅಂತ ನಟರಾಜ್ ಹೇಳಿದ್ದಾರೆ. ‘ಪಾಕ್’ ಎಂಬ ಪದವು ಕನ್ನಡ ಪದ ಪಾಕದಿಂದ ಬಂದಿದೆ. ಇದರರ್ಥ ಸಕ್ಕರೆ ಪಾಕ ಮತ್ತು ಈ ಸಿಹಿತಿಂಡಿಯನ್ನು ಮೈಸೂರಿನಲ್ಲಿ ತಯಾರಿಸಲಾಗಿದ್ದರಿಂದ ಅದು ‘ಮೈಸೂರು ಪಾಕ್’ ಆಯಿತು. ಹೀಗಾಗಿ ಇದು ಪಾಕಿಸ್ತಾನಕ್ಕೆ ಸಂಬಂಧಿಸಿದ ಪಜ ಅಲ್ಲ. ಆದ್ದರಿಂದ ಇದನ್ನು ಬೇರೆ ಹೆಸರಿನಿಂದ ಕರೆಯಲು ಸಾಧ್ಯವೇ ಇಲ್ಲ ಅಂತ ಹೇಳಿದ್ದಾರೆ.
ಯಾರು ಈ ಕಾಕಾಸುರ ಮಾದಪ್ಪ?
ಈ ಹಿಂದೆ 19 ನೇ ಶತಮಾನದಲ್ಲಿ ಮೈಸೂರು ರಾಜರ ಆಸ್ಥಾನದಲ್ಲಿ ಅಡುಗೆ ಭಟ್ಟರಾಗಿದ್ದ ಕಾಕಾಸುರ ಮಾದಪ್ಪ ಮೈಸೂರ್ ಪಾಕ್ ಎನ್ನುವ ಸಿಹಿ ತಿಂಡಿಯನ್ನು ಸೃಷ್ಟಿ ಮಾಡಿದವರು. ಸಕ್ಕರೆ, ತುಪ್ಪ, ಕಡಲೆ ಹಿಟ್ಟು ಬಳಸಿ ಅವರು ಮಾಡಿದ ಸಿಹಿ ತಿನಿಸು ಭಾರೀ ಇಷ್ಟವಾಯಿತು. ಮೈಸೂರಿನಲ್ಲಿ ಮಾಡಿರುವ ಕಾರಣಕ್ಕೆ ಇದಕ್ಕೆ ಮೈಸೂರು ಪಾಕ್ ಎನ್ನುವ ಹೆಸರು ಬಂತು.
Comments are closed.