Bajpe Chalo: ಮಂಗಳೂರು ಬಜ್ಪೆ ಚಲೋ: ಅನುಮತಿ ರಹಿತ ಪ್ರತಿಭಟನೆ: ಆಯೋಜಕರು, ಭಾಷಣಕಾರರ ವಿರುದ್ಧ ಪ್ರಕರಣ ದಾಖಲು!

Share the Article

Bajpe Chalo: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳ ಸಂಘಟನೆಗಳು ಮೇ 25ರಂದು ಬಜ್ಜೆಯಲ್ಲಿ ನಡೆಸಿದ ‘ಬಜೆ ಚಲೋ’ (Bajpe Chalo) ಪ್ರತಿಭಟನೆಯು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಸಾರ್ವಜನಿಕ ಶಾಂತಿಭಂಗ ಹಾಗೂ ಕೋಮು ಪ್ರಚೋದನೆಯ ಆರೋಪದಡಿ ಸಂಘಟಕರು ಮತ್ತು ಭಾಷಣಕಾರರ ವಿರುದ್ಧ ಬಜೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಪೊಲೀಸರ ಪೂರ್ವಾನುಮತಿ ಪಡೆಯದೆ, ಶನಿವಾರ ಮಧ್ಯಾಹ್ನ 3:00 ರಿಂದ ಸಂಜೆ 5:00 ಗಂಟೆಯವರೆಗೆ ಬಜೆ ಶಾರದಾ ಮಂಟಪದ ಬಳಿ ಆಯೋಜಿಸಲಾಗಿದ್ದ ಈ ಪ್ರತಿಭಟನೆಯಲ್ಲಿ ಸುಮಾರು 3,000 ಜನರು ಭಾಗವಹಿಸಿದ್ದರು.

Comments are closed.