Argentina: ಹಾರರ್‌ ಸಿನಿಮಾ ನೋಡುವಾಗ ಚಿತ್ರಮಂದಿರದಿಂದ ಭಯಭೀತರಾಗಿ ಓಡಿ ಹೋದ ಜನ: ಅಷ್ಟಕ್ಕೂ ಆ ಸಿನಿಮಾ ಯಾವುದು?

Share the Article

Argentina: ಸಿನಿಮಾ ರಂಗದಲ್ಲಿ ಕಾಲ ಬದಲಾದಂತೆ ಬಹಳಷ್ಟು ಬದಲಾವಣೆಗಳು ಆಗುತ್ತಿದ್ದು, 3D ಕಾಲವೆಲ್ಲ ಮುಗಿದು 7,12D ತನಕ ಬಂದು ನಿಂತಿದೆ. 7D ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ನೋಡುವುದು ಒಂದು ಉನ್ನತ ಅನುಭವ. ಇಲ್ಲಿ ಎಲ್ಲವನ್ನು ನೈಜವಾಗಿ ಕಾಣಸಿಗಲಿದ್ದು, ಹೆಚ್ಚಾಗಿ ಭಯಾನಕ ಸಿನಿಮಾಗಳನ್ನೇ ಇಲ್ಲಿ ಪ್ರದರ್ಶಿಸಲಾಗುತ್ತದೆ.

ಅರ್ಜೆಂಟಿನಾ ದ ಒಂದು ಚಿತ್ರಮಂದಿರದಲ್ಲಿ ವಾರ್ನರ್ ಬ್ರದರ್ಸ್ ನ ಸೂಪರ್ ನ್ಯಾಚುರಲ್ ಹಾರರ್ ಥ್ರಿಲ್ಲರ್ ಫೈನಲ್ ಡೆಸ್ಟಿನೇಷನ್: ಬ್ಲಡ್ ಲೈನ್ಸ್ ನ ಚುತ್ರವನ್ನು ವೀಕ್ಷಣೆ ಮಾಡುತ್ತಿರುವಾಗ ಜನರನ್ನು ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು ಜನರನ್ನು ಒಮ್ಮೆಲೇ ಭಯದೊಳಗೆ ನೂಕಿದಂತಾಗಿತ್ತು.

ಅರ್ಜೆಂಟಿನಾದ ಲಾ ಪ್ಲಾಟದಲ್ಲಿರುವ ಓಚೊ ಚಿತ್ರಮಂದಿರದಲ್ಲಿ ಈ ಒಂದು ಘಟನೆ ನಡೆದಿದ್ದು, ಸಿನಿಮಾದ ಇಂಟರೆಸ್ಟಿಂಗ್ ಸೀನ್ ಬರುವ ವೇಳೆಗೆ ಚಿತ್ರಮಂದಿರದ ಮೇಲ್ಛಾವಣಿಯ ಒಂದು ಭಾಗ ಕೆಳಗೆ ಬಿದ್ದಿರುತ್ತದೆ. ಇದು ಜನರ ಮೇಲೆ ಬಿದ್ದಿದ್ದು ಇದರಿಂದಾಗಿ ಓರ್ವ ಮಹಿಳೆ ಗಾಯಗೊಂಡಿದ್ದಾರೆ. ಮೊದಲು ಇದು ಕೂಡ ಸಿನಿಮಾದ ಒಂದು ಭಾಗ ಎಂದು ಪರಿಗಣಿಸಿದ್ದ ಜನರಿಗೆ ನಂತರದಲ್ಲಿ ಸನ್ನಿವೇಶದ ಅರಿವಾಗಿ ಗಾಯಗೊಂಡಂತಹ ಮಹಿಳೆಯನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ.

Comments are closed.