China: ಬಾಂಗ್ಲಾ ಹುಡುಗಿಯರನ್ನು ಮದುವೆಯಾಗಬೇಡಿ ಎಂದು ಎಚ್ಚರಿಕೆ ನೀಡಿದ ಚೀನಾ

Share the Article

Delhi: ಬಾಂಗ್ಲಾದ ಢಾಕಾದಲ್ಲಿರುವ ಚೀನಾ ರಾಯಭಾರ ಕಚೇರಿಯು ಗಡಿಯಾಚೆಗಿನ ವಿವಾಹದ ಬಗ್ಗೆ ಚೀನಾ ಪ್ರಜೆಗಳಿಗೆ ಮಹತ್ವದ ಎಚ್ಚರಿಕೆಯನ್ನು ನೀಡಿದೆ. ಯಾವುದೇ ಕಾರಣಕ್ಕೂ ಗಡಿಯ ಆಚೆಗೆ ಮದುವೆಯಾಗಬೇಡಿ ಎಂದು ಭಾನುವಾರ ಚೀನಿ ರಾಯಭಾರಿ ಕಚೇರಿ ಸಲಹೆ ನೀಡಿದ್ದು, ಆನ್ಲೈನ್ ವಿವಾಹ ಯೋಜನೆಗಳ ಬಗ್ಗೆ ಎಚ್ಚರಿಕೆ ಇಂದಿರಬೇಕೆಂದು ಹೇಳಿದೆ.

ನಿರ್ದಿಷ್ಟವಾಗಿ ಅಕ್ರಮವಾಗಿ ನಡೆಯುವ ಆನ್ಲೈನ್ ಮ್ಯಾಚ್ ಮೇಕಿಂಗ್ ಏಜೆಂಟ್ ಗಳ ಕುರಿತಾಗಿ ಹೇಳಿದ್ದು, ಇವರುಗಳ ಬಲೆಗೆ ಬೀಳಬಾರದು ಹಾಗೂ ಡೇಟಿಂಗ್ ಆ್ಯಪ್​ಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿದೆ. ಚೀನಾದಲ್ಲಿ ಲಿಂಗ ಅಸಮಾನತೆಯಿದ್ದು, ಅಲ್ಲಿನ 30 ಮಿಲಿಯನ್ ಪುರುಷರಿಗೆ ಸಂಗಾತಿ ಸಿಗದ ಕಾರಣ ವಿದೇಶಗಳಿಂದ ಹೆಣ್ಣು ತರುವುದನ್ನು ರೂಢಿಸಿಕೊಂಡಿದ್ದಾರೆ. ಹಾಗೂ ಇದರ ಅನುಕೂಲ ಪಡೆದು ದೊಡ್ಡ ಮ್ಯಾಚ್ ಫಿಕ್ಸಿಂಗ್ ದಂಧೆಯೇ ಬಾಂಗ್ಲಾ ದೇಶದಲ್ಲಿ ಶುರುವಾಗಿತ್ತು. ಬಾಂಗ್ಲಾದೇಶದ ಮ್ಯಾಚ್ ಫಿಕ್ಸಿಂಗ್ ಏಜೆಂಟ್​ಗಳ ಇದೇ ರೀತಿಯ ಜಾಲಗಳು ಬಾಂಗ್ಲಾದೇಶದ ಮಹಿಳೆಯರನ್ನು ಭಾರತಕ್ಕೂ ಕೂಡ ಕಳ್ಳಸಾಗಣೆ ಮಾಡಿವೆ.

ಚೀನಾದ ಕಾನೂನಿನ ಪ್ರಕಾರ, ವಿವಾಹ ಸಂಸ್ಥೆಗಳು ಗಡಿಯಾಚೆಗಿನ ವಿವಾಹ ಸೇವೆಗಳನ್ನು ಸುಗಮಗೊಳಿಸುವುದನ್ನು ಅಥವಾ ಮರೆಮಾಚುವುದನ್ನು ನಿಷೇಧಿಸಲಾಗಿದ್ದು, ಬಾಂಗ್ಲಾದೇಶದಲ್ಲಿ ಅಕ್ರಮ ಗಡಿಯಾಚೆಗಿನ ವಿವಾಹಗಳಲ್ಲಿ ತೊಡಗಿರುವುದು ಕಂಡುಬಂದರೆ ಯಾವುದೇ ಚೀನೀ ಪ್ರಜೆ ಮಾನವ ಕಳ್ಳಸಾಗಣೆ ಆರೋಪದ ಮೇಲೆ ಬಂಧನವನ್ನು ಎದುರಿಸಬೇಕಾಗುತ್ತದೆ ಎಂದು ರಾಯಭಾರ ಕಚೇರಿ ಎಚ್ಚರಿಸಿದೆ.

Comments are closed.