Bigg Boss: ಈ ಬಾರಿಯ ದೊಡ್ಮನೆ ಆಟದಲ್ಲಿ ಭಾರೀ ಬದಲಾವಣೆ: ಸೋಶಿಯಲ್ ಮೀಡಿಯಾ ಸ್ಟಾರ್ಸ್‌ಗಳಿಗೆ ಕಹಿ ಸುದ್ದಿ

Mumbai: ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಇನ್ನೇನು ಮತ್ತೆ ಪ್ರಾರಂಭವಾಗಲಿದ್ದು, ಪ್ರತಿ ಸೀಸನ್ ನಲ್ಲಿಯೂ ಒಂದಷ್ಟು ಬಡಲಾವಣೆಗಳನ್ನು ಬಿಗ್ ಬಾಸ್ ತಂಡ ತರುತ್ತದೆ. ಹಾಗೆಯೇ ಈ ಬಾರಿಯೂ ಹಲವಾರು ಬದಲಾವಣೆಗಳನ್ನು ತರಬೇಕೆಂದು ಯೋಜನೆಗಳನ್ನು ಮಾಡಿಕೊಂಡಿದೆ ಎಂದು ವರದಿಗಕು ತಿಳಿಸಿವೆ.

ಸಲ್ಮಾನ್ ಖಾನ್ ನಡೆಸುವ ಬಿಗ್ ಬಾಸ್ ಸೀಸನ್ 19 ರ ಕುರಿತಾಗಿ ಚರ್ಚೆಯಾಗುತ್ತಿದ್ದು, ಅದು ಜುಲೈ ತಿಂಗಲಿನಲ್ಲಿಯೇ ಪ್ರಾರಂಭವಾಗುತ್ತದೆ ಎಂದು ಮಾತುಗಳು ಕೇಳಿ ಬರುತ್ತಿವೆ. ಆರಂಭದಲ್ಲಿ ಯಾರೆಲ್ಲ ಶೋ ಗೆ ಬರಬಹುದು ಎಂದು ಚರ್ಚೆಯಾಗುವುದು ಕಾಮನ್, ಹಾಗೆಯೇ ಈ ಬಾರಿಯೂ ಆಗಿದ್ದು ಕಿರುತೆರೆ ಹಾಗೂ ಸಿನಿಮಾ ಸೆಲೆಬ್ರೆಟಿಗಳು ಮಾತ್ರವೇ ಬರುತ್ತಾರೆ ಮತ್ತು ಸೋಶಿಯಲ್ ಮೀಡಿಯಾ ಪ್ರಭಾವಿಗಳು, ಯೂಟ್ಯೂಬರ್ ಇರುವುದಿಲ್ಲ ಎಂದು ಮೂಲಗಳು ಹೇಳುತ್ತವೆ.
ಕಳೆದ ಬಾರಿ ಶೋ ಗೆ ಬಂದ ನಂತರ ಯುಟ್ಯೂಬರ್ ಗಳ ಅಭಿಮಾನಿಗಳು ಹೆಚ್ಚಾಗಿತ್ತು. ಆದರೆ ಈ ಬಾರಿ ಅಂತಹ ಪ್ರಭಾವಿಗಳನ್ನು ಶೋಗೆ ಕರೆತರದೆ ಸಿನಿಮದವರನ್ನು ಮಾತ್ರವೇ ಕರೆತರುತ್ತಾರೆಂದು ಸುದ್ದಿಗಳು ಹೇಳುತ್ತಿವೆ. ಜುಲೈ 29ರಿಂದ ಈ ಸೀಸನ್ ಪ್ರಾರಂಭವಾಗುತ್ತದೆಂಬ ಸುದ್ದಿಗಳಿದ್ದು, ಈ ಬಾರಿ ಓಟಿಟಿ ಸೀಸನ್ ಇಲ್ಲದ ಕಾರಣ ಬಿಗ್ ಬಾಸ್ ಐದು ತಿಂಗಳ ಕಾಲ ನಡೆಯಲಿದೆ ಎಂದು ವರದಿಯಾಗಿದೆ.
Comments are closed.