Bellary: ಸಂಡೂರಿನಲ್ಲಿ ಭೀಕರ ಅಪಘಾತ: ಸ್ಥಳದಲ್ಲಿಯೇ ಮಹಿಳೆ,ಮಕ್ಕಳು ಸೇರಿ ನಾಲ್ವರ ಸಾವು

Deadly Accident: ಬಳ್ಳಾರಿಯಲ್ಲಿ ಮೈನಿಂಗ್ ಟಿಪ್ಪರ್‌ಗೆ ಲಾರಿ ಡಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ ನಡೆದು ಸ್ಥಳದಲ್ಲಿಯೇ ನಾಲ್ವರು ಸಾವಿಗೀಡಾದ ಘಟನೆ ಸಂಡೂರಿನ ಜೈಸಿಂಗಪುರ ಬಳಿ ಸೋಮವಾರ (ಮೇ 26) ನಡೆದಿದೆ.

ಸಂಡೂರು ತಾಲೂಕಿನ ಲಕ್ಷ್ಮೀಪುರದ ನಾಲ್ವರು ಸಾವಿಗೀಡಾಗಿದ್ದಾರೆ. ಇಬ್ಬರು ಮಹಿಳೆಯರು, ಇಬ್ಬರು ಮಕ್ಕಳು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಇನ್ನೋರ್ವ ವ್ಯಕ್ತಿಗೆ ಗಂಭೀರ ಗಾಯವುಂಟಾಗಿದ್ದು, ಕೊಪ್ಪಳದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಸಂಡೂರು ಪೊಲೀಸರು ಭೇಟಿ ನೀಡಿದ್ದಾರೆ.
Comments are closed.