Belthangady: ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಮುಗೇರಡ್ಕ ರಸ್ತೆಯಲ್ಲಿ ಅಪಾಯದ ಗುಂಡಿ

Belthangady: ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಮುಗೇರಡ್ಕ ರಸ್ತೆಯಲ್ಲಿ ಗುಂಡಿಯೊಂದು ಉಂಟಾಗಿದೆ. ಇದು ಅಪಾಯಕಾರಿಯಾಗಿದ್ದು, ಸಾರ್ವಜನಿಕರು ಹಲವು ಭಾರಿ ಅಧಿಕಾರಿಗಳಿಗೆ ಗುಂಡಿ ಮುಚ್ಚಲು ತಿಳಿಸಿದರೂ, ಯಾವುದೆ ದುರಸ್ತಿ ಕಾರ್ಯ ನಡೆದಿಲ್ಲ.

ಪರಿಣಾಮ ಇಂದು ಒಂದೇ ದಿನ ಮೂರು ದ್ವಿಚಕ್ರ ವಾಹನಗಳು ಈ ಅಪಾಯಕಾರಿ ಗುಂಡಿಯಿಂದ ಅಪಘಾತಕಿಡಾಗಿ ಸವಾರರಿಗೆ ಗಾಯಗಳಾಗಿವೆ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದರು.
ಯುವಕರಿಂದ ಗುಂಡಿ ಮುಚ್ಚು ಕಾರ್ಯ, ಶ್ಲಾಘನೆ
ಪಚ್ಚು ನಂದಿಬೆಟ್ಟ, ಯಾದವ್ ಗರ್ಡಾಡಿ, ದಿನಕರ್ ಕುಲಾಲ್, ಹರೀಶ್ ಕೋಟ್ಯಾನ್ ಗರ್ಡಾಡಿ ಇವರೆಲ್ಲರೂ ಸೇರಿ ಗುಂಡಿ ಮುಚ್ಚುವ ಕೆಲಸ ಮಾಡಿ, ಅಪಾಯದ ಮಟ್ಟವನ್ನು ಕಡಿಮೆ ಮಾಡಿದ್ದಾರೆ.

Comments are closed.